ಅಧ್ಯಕ್ಷೀಯ ಚುನಾವಣೆಯ ಪೂರ್ವ ಸಮೀಕ್ಷೆಯಲ್ಲಿ ಸಮಬಲ ಸಾಧಿಸಿರುವ ಡೆಮಾಕ್ರಟಿಕ್ ಪಕ್ಷದ ಹಿಲರಿ ಮತ್ತು ರಿಪಬ್ಲಿಕ್ ಪಕ್ಷದ ಬರಾಕ್ ಒಬಾಮಾ ಅವರು ಮಂಗಳವಾರ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಅಮೆರಿಕದ ಈಶಾನ್ಯ ಭಾಗದಲ್ಲಿ ಭಾರಿ ಚುನಾವಣಾ ಪ್ರಚಾರ ನಡೆಸಿದರು.
ನ್ಯೂ ಹ್ಯಾಂಪಷೈರ್‌ನಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ನಂತರ ಕನೆಕ್ಟಿಕಟ್‌ನಲ್ಲಿರುವ ಯಾಲೆ ವಿಶ್ವವಿದ್ಯಾಲಯಕ್ಕೆ ಚುನಾವಣಾ ಪ್ರಚಾರ ನಿಮಿತ್ಯ ಆಗಮಿಸಿದ ನ್ಯೂಯಾರ್ಕ್ ಸೆನೆಟರ್ ಹಿಲರಿ ಕ್ಲಿಂಟನ್ ಅವರು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ಯಾಲೆಯಲ್ಲಿ ಕಳೆದ ಜೀವನವನ್ನು ನೆನಪಿಸಿಕೊಂಡರು.
ಇಲಿನಾಯ್ಸ್ ಸೆನೆಟರ್, ಬರಾಕ್ ಒಬಾಮಾ ಅವರು ನ್ಯೂಜೆರ್ಸಿಯಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ ಅಮೆರಿಕದ 24 ರಾಜ್ಯಗಳಲ್ಲಿ ಒಂದೇ ದಿನ ಮತದಾನ ನಡೆಯಲಿದೆ.
ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಒಬಾಮಾ ಅವರು, ಅಮೆರಿಕದ ಅಧ್ಯಕ್ಷರ ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ. ಬದಲಾವಣೆಗೆ ಇನ್ನೂ ಕಾಯುವಂತಿಲ್ಲ ಎಂದು ಹೇಳಿದರು. ಒಬಾಮಾ ಅವರೊಂದಿಗೆ ಮೆಸಾಚೂಸೆಟ್ಸ್ ಸೆನೆಟರ್ ಎಡ್ವರ್ಡ್ ಕೆನಡಿ, ಕ್ಯಾರೋಲಿನ್ ಕೆನಡಿ ಉಪಸ್ಥಿತರಿದ್ದರು.
|