ಸಿನಿಮೀಯ ಘಟನೆಯೊಂದರಲ್ಲಿ, ಹೊತ್ತಿ ಉರಿಯುತ್ತಿದ್ದ ಕಟ್ಟಡದ ಮೂರನೇ ಮಹಡಿಯಿಂದ ಎಸೆಯಲ್ಪಟ್ಟ ಮಗುವೊಂದು ಸುರಕ್ಷಿತವಾಗಿ ಬದುಕುಳಿದಿದೆ.
ದಕ್ಷಿಣ ಜರ್ಮನಿಯ ಲುಡ್ವಿಗ್ಶಾಫೆನ್ ಎಂಬಲ್ಲಿನ ಫ್ಲ್ಯಾಟ್ ಒಂದಕ್ಕೆ ಬೆಂಕಿ ತಗುಲಿದ್ದು, ಐವರು ಮಕ್ಕಳು ಹಾಗೂ ಗರ್ಭಿಣಿ ಮಹಿಳೆ ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದರು. ತನ್ನ ಪುಟ್ಟ ಮಗುವನ್ನು ಉಳಿಸುವ ನಿಟ್ಟಿನಲ್ಲಿ ತಂದೆಯೊಬ್ಬ ಅದನ್ನು ಮೂರನೇ ಮಹಡಿಯಿಂದ ಹೊರಕ್ಕೆಸೆದಿದ್ದ. ಬೀಳುತ್ತಿದ್ದ ಮಗುವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಿಡಿದುಕೊಂಡಿದ್ದು, ಮಗು ಬದುಕಿಳಿದಿದೆ.
ಹೊತ್ತಿ ಉರಿಯುತ್ತಿದ್ದ ಮಹಡಿಯಲ್ಲಿ ಜನರು ಅತ್ತಿಂದಿತ್ತ ಧಾವಿಸುತ್ತಿದ್ದುದನ್ನು ಅಗ್ನಿಶಾಮಕ ದಳವು ಕೆಳಗಿನಿಂದಲೇ ಗಮನಿಸುತ್ತಿತ್ತು. ಮಗುವೊಂದು ಹೊರ ಬೀಳುತ್ತಿದ್ದಾಗ, ಅದನ್ನು ಅವರು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
|