ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ ಭಾರತದ ಮೈಲುಗಲ್ಲು: ರೋನೆನ್ ಸೇನ್
ಇಂಡೊ-ಅಮೆರಿಕ ನಾಗರಿಕ ಅಣು ಒಪ್ಪಂದ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯತೆಗೆ ಸಾಕ್ಷಿ ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಬಾರಿ ರೋನೆನ್ ಸೇನ್ ಅಭಿಪ್ರಾಯ ವ್ಯಕ್ತಪಡಿಸಿದ್ದು. ರಷಿಯಾ, ಫ್ರಾನ್ಸ್ ಮತ್ತು ಯುರೋಪಿಯನ್ ಮುಂತಾದ ಜಗತ್ತಿನ ಪ್ರಬಲ ರಾಷ್ಟ್ರಗಳು ಉಭಯ ದೇಶಗಳ ನಡುವಿನ ನಾಗರಿಕ ಅಣು ಒಪ್ಪಂದಕ್ಕೆ ಸಹಮತ ಸೂಚಿಸಿವೆ ಎಂದಿದ್ದಾರೆ.

ಮಾಧ್ಯಮಗಳ ಗಮನವನ್ನು ಸೆಳೆದಿದ್ದ ಉಭಯ ದೇಶಗಳ ನಡುವಿನ ನಾಗರಿಕ ಅಣು ಒಪ್ಪಂದವು ಭಾರತ ಮತ್ತು ಅಮೆರಿಕ ನಡುವೆ ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧಗಳಿಗೆ ಉದಾಹರಣೆಯಾಗಬಲ್ಲದು. ಅಲ್ಲದೆ ಪ್ರಬಲ ಆರ್ಥಿಕ ಶಕ್ತಿಯೊಂದಿಗೆ ಸುಧಾರಿಸಿದ ಸಂಬಂಧಗಳು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಭಾರತದ ಪ್ರಾಬಲ್ಯತೆಗೆ ಸಾಕ್ಷಿ ಎಂದು ಹೇಳಿದರು

ಭಾರತ ಮತ್ತು ಅಮೆರಿಕ ನಡುವೆ ಮಾಡಿಕೊಳ್ಳಲಾಗಿರುವ ನಾಗರಿಕ ಅಣು ಒಪ್ಪಂದದ ಬಗ್ಗೆ ರಷಿಯಾ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಅಲ್ಲದೇ ಇತರ ದೇಶಗಳ ನಡುವೆ ಸಹಮತ ಇದ್ದರೂ ಕೆಲ ವಿಚಾರಗಳು ಪರಿಹಾರಗೊಂಡಿಲ್ಲ. ಎಂದು ವುಡ್ರೊ ವಿಲ್ಸನ್ ಕೇಂದ್ರದಲ್ಲಿ ನಡೆದ ಮಂಡಳಿಯ ನಿರ್ದೇಶಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಾಂಪ್ರದಾಯಿಕವಾಗಿ ಭಾರತ ಮತ್ತು ಅಮೆರಿಕ ಮಿಲಿಟರಿ ಮಿತ್ರ ರಾಷ್ಟ್ರಗಳಲ್ಲ ಎಂದು ಹೇಳಿದ ಸೇನ್ ಭಾರತ ಮತ್ತು ಅಮೆರಿಕ ನಡುವೆ ರಚನಾತ್ಮಕ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿವೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿರುವ ಭಾರತ ತನ್ನ ಉದ್ದಿಶ್ಯ ಸಾಧನೆಯಲ್ಲಿ ನಂಬಿರುವ ತತ್ವಗಳಿಗೆ ತಿಲಾಂಜಲಿ ಇಡುವುದು ಇಲ್ಲ. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಭಿನ್ನ ಮತ ಮುಂದುವರಿಯಲಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆಯು ಭಿನ್ನಾಭಿಪ್ರಾಯದ ತಳಹದಿಯ ಮೇಲೆ ನಿಂತಿದೆ. ಭಿನ್ನಾಭಿಪ್ರಾಯ, ತಾತ್ವಿಕ ವಿರೋಧಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗಗಳು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಅಧುನಿಕ ಜಾಗತಿಕ ಇತಿಹಾಸದಲ್ಲಿ ಭಾರತ ಮತ್ತು ಅಮೆರಿಕ ಪ್ರಜಾಪ್ರಭುತ್ವ ಸ್ಥಾಪಕ ರಾಷ್ಟ್ರಗಳು. ಜಗತ್ತಿನ ಅತಿದೊಡ್ಡ ಭಯೋತ್ಪಾದನಾ ಕೇಂದ್ರದ ಪಕ್ಕದಲ್ಲಿ ಭಾರತ ಇದೆ. ಸೆಪ್ಟಂಬರ್ 11ಕ್ಕೆ ಮುನ್ನ ಭಾರತ ಮತ್ತು ಅಮೆರಿಕ ಭಯೋತ್ಪಾದನೆಯ ವಿರುದ್ಧ ಜಂಟಿಯಾಗಿ ಸಮರ ಸಾರಿದ್ದವು ಎಂದು ಈ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಬೆಳೆದು ಬಂದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಬೆಳಕು ಚೆಲ್ಲಿದರು.
ಮತ್ತಷ್ಟು
3ನೇ ಮಹಡಿಯಿಂದ ಹೊರಕ್ಕೆಸೆದ ಮಗು ಸುರಕ್ಷಿತ
ಅಮೆರಿಕದ ನಿರ್ಣಾಯಕ "ಮಂಗಳವಾರ"
ಪಾಕ್ ಚುನಾವಣೆಯೊಂದು ನಾಟಕ: ಷರೀಫ್
ಅನಿವಾಸಿ ಭಾರತೀಯರತ್ತ ಹಿಲರಿ ಒಲವು
ಸಮೂಹ ನಾಶದ ಸಿದ್ದತೆಯಲ್ಲಿರುವ ಖೈದಾ ಉಗ್ರ ವರದಿ
ರಾವಲ್ಪಿಂಡಿ ಬಾಂಬ್ ಸ್ಫೋಟ 8 ಸಾವು ಶಂಕೆ