ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎರಡು ಬಾರಿ ಕತ್ತು ಕತ್ತರಿಸಿದರೂ ಸಾಯದ ಬಾತು ಕೋಳಿ!
ಆಯುಸ್ಸಿದ್ದರೆ ಏನೇ ಆದರೂ ಬದುಕಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಬಾತುಕೋಳಿ. ಎರಡು ಬಾರಿ ಕತ್ತು ಕತ್ತರಿಸಿದರೂ ಬಾತುಕೋಳಿಯೊಂದು ಇನ್ನೂ ಜೀವಂತವಾಗಿದ್ದು, ಅಚ್ಚರಿ ಮೂಡಿಸಿದೆ.

ಮಲೇಷ್ಯಾದ ಅಲೊರ್ ಗಾಜಾ ಜಿಲ್ಲೆಯ ಮಸ್ಜಿದ್ ತಾನಾ ಪ್ರದೇಶದ ಪೌಲ್ಟ್ರಿ ಮಾಲಿಕ ಬಹರಿ ಅಲಿ ಎಂಬಾತ ಭಾನುವಾರ ಬೆಳಿಗ್ಗೆ ಎರಡು ಬಾರಿ ಅದರ ಕೊರಳು ಕೊಯ್ದಿದ್ದ. ಗಂಟೆಗಳ ಬಳಿಕ ಅದು ಮರುಜೀವವಾಗಿದೆ!

ಬಾತುಕೋಳಿಯ ಕೊರಳನ್ನು ಬಹುತೇಕವಾಗಿ ಕತ್ತರಿಸಿದ್ದರೂ ಅದಿನ್ನೂ ಜೀವಂತವಾಗಿದೆ ಎಂದು ಬಹರಿ ಅಲಿ ಹೇಳಿರುವುದಾಗಿ ನ್ಯೂ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.

ಮೊದಲು ಈ ಬಾತುಕೋಳಿಯ ಕತ್ತು ಕತ್ತರಿಸಿ 15 ಗಂಟೆಗಳ ಕಾಲ ನಿಗಾ ಇರಿಸಿದ ಬಳಿಕ, ಕೆಲಸ ಮುಗಿಸಿಬಿಡಲು ಬಹರಿ ಅಲಿಯು ಒಬ್ಬ ಇಮಾಮರ ಸಹಾಯ ಕೇಳಿದ. ಎರಡನೇ ಹತ್ಯಾ ಯತ್ನದ ಬಳಿಕವೂ ಅದು ಜೀವಂತವಾಗಿಯೇ ಇತ್ತು.

ಬೆಳಗ್ಗಾಗುವಾಗ ಈ ಬಾತು ಸಾಯುತ್ತದೆ ಎಂದೇ ಭಾವಿಸಿದ್ದೆ. ಆದರೆ ಅದು ಎಂದಿನಂತೆ ಓಡಾಡುತ್ತಿತ್ತು ಎಂದು ಬಹರಿ ಹೇಳಿದ್ದಾನೆ. ಎರಡು ಗಾಯ ಇರುವುದರಿಂದ ಅಲ್ಲಿಂದ ವಾಸನೆ ಬರುತ್ತಿದ್ದು, ತಿನ್ನಲು ಯೋಗ್ಯವಲ್ಲ. ಆದರೆ ಅದಿನ್ನೂ ಸ್ವಸ್ಥವಾಗಿರುವಾಗ ಹೇಗಿದೆಯೋ ಅದೇ ರೀತಿ ಓಡಾಡುತ್ತಿದೆ ಎಂದಾತ ತಿಳಿಸಿದ್ದಾನೆ.
ಮತ್ತಷ್ಟು
ಅಣು ಒಪ್ಪಂದ ಭಾರತದ ಮೈಲುಗಲ್ಲು: ರೋನೆನ್ ಸೇನ್
3ನೇ ಮಹಡಿಯಿಂದ ಹೊರಕ್ಕೆಸೆದ ಮಗು ಸುರಕ್ಷಿತ
ಅಮೆರಿಕದ ನಿರ್ಣಾಯಕ "ಮಂಗಳವಾರ"
ಪಾಕ್ ಚುನಾವಣೆಯೊಂದು ನಾಟಕ: ಷರೀಫ್
ಅನಿವಾಸಿ ಭಾರತೀಯರತ್ತ ಹಿಲರಿ ಒಲವು
ಸಮೂಹ ನಾಶದ ಸಿದ್ದತೆಯಲ್ಲಿರುವ ಖೈದಾ ಉಗ್ರ ವರದಿ