ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ಕೃಷ್ಟ ಮಂಗಳವಾರ: ಮೆಕ್ ಕೆಯ್ನ್ ಮುನ್ನಡೆ
ಅಮೆರಿಕ ಅಧ್ಯಕ್ಷ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುವ ಪ್ರಾಥಮಿಕ ಚುನಾವಣೆಯ 'ಉತ್ಕೃಷ್ಟ ಮಂಗಳವಾರ' ಸ್ಫರ್ಧೆಯಲ್ಲಿ ರಿಪಬ್ಲಿಕನ್ ಪಕ್ಷದ ಮೆಕ್ ಕೆಯ್ನ್ ಅವರು ದೊಡ್ಡ ಗೆಲುವುಗಳ ಸರಣಿಯನ್ನೇ ಸಾಧಿಸಿದ್ದಾರೆ. ಡೆಮಾಕ್ರೆಟ್‌ನ ಬಾರಕ್ ಒಬಾಮ ತನ್ನ ಪ್ರತಿಸ್ಫರ್ಧಿ ಹಿಲರಿ ಕ್ಲಿಂಟನ್ ಅವರನ್ನು ಹಿಂದಿಕ್ಕಿದ್ದಾರೆ.

ಉಭಯ ಪಕ್ಷಗಳಿಂದ ಅಧ್ಯಕ್ಷ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ 24 ಅಮೆರಿಕ ರಾಜ್ಯಗಳಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಈ ಮಹಾನ್ ಮಂಗಳವಾರದ ಚುನಾವಣೆ ಅತ್ಯಂತ ಪ್ರಮುಖವಾದುದು.

ಒಬಾಮ ಒಂಭತ್ತು ರಾಜ್ಯಗಳಲ್ಲಿ ಪ್ರಾಥಮಿಕ ಚುನಾವಣೆ ಗೆದ್ದಿದ್ದರೆ, ಹಿಲರಿ ಕ್ಲಿಂಟನ್ ಆರು ರಾಜ್ಯಗಳನ್ನು ಗೆದ್ದಿದ್ದಾರೆ.

ಒಬಾಮ ಜಾರ್ಜಿಯ, ದೆಲವೇರ್, ಅಲ್ಬಮ, ಕನ್ಸಾಸ್, ಉತ್ತರ ಡಕೋಟ, ಕನ್ನೆಕ್ಟಿಕಟ್, ಉತಾ, ಮಿನ್ನೆಸೊಟ ಮತ್ತು ಇಲಿನೋಯಿಸ್‌ನಲ್ಲಿ ಗೆಲವು ಸಾಧಿಸಿದ್ದರೆ, ಹಿಲರಿ ಅವರು ಒಕ್ಲಾಹಾಮ ಟೆನ್ನೆಸ್ಸೀ, ಅರ್ಕಾನ್‌ಸಾಸ್, ಮೆಸ್ಸಾಚುಸೆಟ್ಸ್, ನ್ಯೂಜೆರ್ಸಿ ಮತ್ತು ತನ್ನ ತವರು ನೆಲ ನ್ಯೂಯಾರ್ಕ್‌ನಲ್ಲಿ ಗೆದ್ದಿದ್ದಾರೆ.
ಮತ್ತಷ್ಟು
ಎರಡು ಬಾರಿ ಕತ್ತು ಕತ್ತರಿಸಿದರೂ ಸಾಯದ ಬಾತು ಕೋಳಿ!
ಅಣು ಒಪ್ಪಂದ ಭಾರತದ ಮೈಲುಗಲ್ಲು: ರೋನೆನ್ ಸೇನ್
3ನೇ ಮಹಡಿಯಿಂದ ಹೊರಕ್ಕೆಸೆದ ಮಗು ಸುರಕ್ಷಿತ
ಅಮೆರಿಕದ ನಿರ್ಣಾಯಕ "ಮಂಗಳವಾರ"
ಪಾಕ್ ಚುನಾವಣೆಯೊಂದು ನಾಟಕ: ಷರೀಫ್
ಅನಿವಾಸಿ ಭಾರತೀಯರತ್ತ ಹಿಲರಿ ಒಲವು