ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಗ್ದಾದ್ ಸಮೀಪ ಸಾಮೂಹಿಕ ಗೋರಿ ಪತ್ತೆ
ಬಗ್ದಾದಿನ ವಾಯವ್ಯ ದಿಕ್ಕಿನಲ್ಲಿರುವ ಸಾಮೂಹಿಕ ಗೋರಿಯಲ್ಲಿ ಸುಮಾರು 50 ದೇಹಗಳು ಪತ್ತೆಯಾಗಿವೆ ಎಂದು ಇರಾಕಿ ಅಧಿಕಾರಿಗಳು ಹೇಳಿದ್ದಾರೆ.

ತರ್ತಾರ್ ಸರೋವರದ ಸಮೀಪದ ಸಮರ್ರದ 25 ಕಿಲೋ ಮೀಟರ್ ಪಶ್ಚಿಮಕ್ಕಿರುವ ಜಝೀರ ಎಂಬ ಗ್ರಾಮದಲ್ಲಿ ಅಮೆರಿಕ ಬೆಂಬಲಿತ ಸುನ್ನಿ ಬುಡಕಟ್ಟು ಪಡೆಯು ಗಸ್ತು ತಿರುಗುತ್ತಿದ್ದ ವೇಳೆ ಈ ಗೋರಿ ಪತ್ತೆಯಾಗಿದೆ ಎಂದು ಕರ್ನೆಲ್ ಮಾಝಿನ್ ಯೂನಿಸ್ ಹುಸೈನ್ ಹೇಳಿದ್ದಾರೆ.

ಹುಸೈನ್ ಅವರು ಅಮೆರಿಕ ಪಡೆಗಳಿಗಾಗಿ ಕಾರ್ಯನಿರ್ವಹಿಸುವ ಸ್ಥಳೀಯ ವ್ಯಕ್ತಿಗಳನ್ನೊಳಗೊಂಡ ಪಡೆಯ ಕಮಾಂಡರ್ ಆಗಿದ್ದಾರೆ.

ಕೆಲವು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದು, ತಿಂಗಳ ಹಿಂದೆ ಹೂಳಿರಬಹುದೆಂದು ಸಂಶಯಿಸಲಾಗಿದೆ. ಮತ್ತೆ ಕೆಲವು ಬಲಿಪಶುಗಳು ಇತ್ತೀಚೆಗೆ ಸಾವಿಗೀಡಾಗಿರುವಂತೆ ಕಂಡು ಬಂದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಸಮರ್ರ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಳೆದ ಕೆಲವು ತಿಂಗಳಲ್ಲಿ ಸುಮಾರು 200ಕ್ಕೂ ಅಧಿಕ ಮೃತ ದೇಹಗಳು ಸಾಮೂಹಿಕ ಗೋರಿಗಳಲ್ಲಿ ತರ್ತಾರ್ ಸರೋವರದ ಸುತ್ತುಮುತ್ತ ಪತ್ತೆಯಾಗಿದೆ.
ಮತ್ತಷ್ಟು
ಉತ್ಕೃಷ್ಟ ಮಂಗಳವಾರ: ಮೆಕ್ ಕೆಯ್ನ್ ಮುನ್ನಡೆ
ಎರಡು ಬಾರಿ ಕತ್ತು ಕತ್ತರಿಸಿದರೂ ಸಾಯದ ಬಾತು ಕೋಳಿ!
ಅಣು ಒಪ್ಪಂದ ಭಾರತದ ಮೈಲುಗಲ್ಲು: ರೋನೆನ್ ಸೇನ್
3ನೇ ಮಹಡಿಯಿಂದ ಹೊರಕ್ಕೆಸೆದ ಮಗು ಸುರಕ್ಷಿತ
ಅಮೆರಿಕದ ನಿರ್ಣಾಯಕ "ಮಂಗಳವಾರ"
ಪಾಕ್ ಚುನಾವಣೆಯೊಂದು ನಾಟಕ: ಷರೀಫ್