ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ಜನಾಂಗದ ಶಾಲೆಗೆ ಮಲೇಶ್ಯಾ ಅನುದಾನ
ಭಾರತೀಯ ಜನಾಂಗದವರ ಮಕ್ಕಳು ಶಿಕ್ಷಣಾಭ್ಯಾಸ ಮಾಡುವ ಸುಮಾರು 22 ತಮಿಳು ಶಾಲೆಗಳ ರಿಪೇರಿ ಅಥವಾ ಪುನರ್ನಿಮಾಣಕ್ಕಾಗಿ ಮಲೇಶ್ಯ ಸರಕಾರ 20 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಜನಾಂಗೀಯ ತಾರತಮ್ಯ ಆರೋಪ ಹೊರಿಸಿ ಸರಕಾರದ ವಿರುದ್ಧ ಹಿಂದೆಂದೂ ಕಾಣದ ರೀತಿಯಲ್ಲಿ ಬೀದಿ ಪ್ರತಿಭಟನೆ ನಡೆಸಿದ್ದ ಭಾರತೀಯ ಸಮುದಾಯವನ್ನು ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಒಲೈಸಲು ಮುಂದಾಗಿರುವಂತಿದೆ.

ಮಲೇಶ್ಯಾದ ಸೀಲಂಗೂರು, ಕೇದಾಹ್, ಪೆನಾಂಗ್ ಮತ್ತು ಪರಾಕ್ ರಾಜ್ಯಗಳಲ್ಲಿನ ತಮಿಳು ಶಾಲಾ ಮಕ್ಕಳಿಗೆ ಉತ್ತಮ ವಾತವರಣ ನಿರ್ಮಿಸಲು ಈ ಆನುದಾನವು ಸಹಾಯವಾಗಲಿದೆ ಎಂದು ಅಬ್ದುಲ್ಲಾ ಬದಾವಿ ಸರಕಾರದಲ್ಲಿ ಕಾರ್ಯ ಸಚಿವರಾಗಿರುವ ಮಲೇಶ್ಯದ ಭಾರತೀಯ ಕಾಂಗ್ರೆಸ್ (ಎಂಐಸಿ) ಮುಖ್ಯಸ್ಥ ಶಾಮಿ ವೆಲ್ಲು ಹೇಳಿದ್ದಾರೆ.

ಬಹು ಜನಾಂಗೀಯರು ವಾಸ್ತವ್ಯ ಹೊಂದಿರು ಮಲೇಶ್ಯದ ಭಾರತೀಯ ಸಮುದಾಯದಲ್ಲಿ ಗರಿಷ್ಠ ಮಂದಿ ತಮಿಳಾಗಿರುತ್ತಾರೆ. ಇವರ ಪೂರ್ವಜರನ್ನು ಸುಮಾರು 200 ವರ್ಷಗಳಿಗೂ ಹಿಂದೆ ಬ್ರಿಟಿಷರ ಕಾಲದಲ್ಲಿ ಕಾರ್ಮಿಕರನ್ನಾಗಿ ಕರೆದೊಯ್ಯಲಾಗಿತ್ತು.

ಮಲೇಶ್ಯಾದಲ್ಲಿರುವ 27 ದಶಲಕ್ಷ ಜನಸಂಖ್ಯೆಯಲ್ಲಿ ಶೇ. 7.8ರಷ್ಟು ಮಂದಿ ಭಾರತೀಯ ಮೂಲದವರು. ಕಳೆದ ನವೆಂಬರ್‌ನಲ್ಲಿ ಹಿಂದೂ ಹಕ್ಕುಗಳ ಕ್ರಿಯಾ ಸಮಿತಿ (ಹಿಂದ್ರಾಫ್) ನಡೆಸಿದ ಬೃಹತ್ ಪ್ರತಿಭಟನೆಯ ಬಳಿಕ ವೇಲು ತನ್ನ ಪಟ್ಟದಿಂದ ಕೆಳಗಿಳಿಯಬೇಕು ಎಂದು ಹಲವಾರು ಭಾರತೀಯರು ಒತ್ತಾಯಿಸಿದ್ದರು. ಇವರು ಸುಮಾರು 30 ವರ್ಷಗಳಿಂದ ಎಂಐಸಿ ಮುಖ್ಯಸ್ಥರಾಗಿದ್ದಾರೆ.
ಮತ್ತಷ್ಟು
ಬಗ್ದಾದ್ ಸಮೀಪ ಸಾಮೂಹಿಕ ಗೋರಿ ಪತ್ತೆ
ಉತ್ಕೃಷ್ಟ ಮಂಗಳವಾರ: ಮೆಕ್ ಕೆಯ್ನ್ ಮುನ್ನಡೆ
ಎರಡು ಬಾರಿ ಕತ್ತು ಕತ್ತರಿಸಿದರೂ ಸಾಯದ ಬಾತು ಕೋಳಿ!
ಅಣು ಒಪ್ಪಂದ ಭಾರತದ ಮೈಲುಗಲ್ಲು: ರೋನೆನ್ ಸೇನ್
3ನೇ ಮಹಡಿಯಿಂದ ಹೊರಕ್ಕೆಸೆದ ಮಗು ಸುರಕ್ಷಿತ
ಅಮೆರಿಕದ ನಿರ್ಣಾಯಕ "ಮಂಗಳವಾರ"