ಎಲ್‌ಟಿಟಿಇ ಉಗ್ರರ ವಿರುದ್ದ ಭಾರಿ ಸೇನಾ ಕಾರ್ಯಾಚರಣೆ ನಡೆಸಿ 12 ಮಂದಿ ಉಗ್ರರನ್ನು ಹತ್ಯೆಗೈದು 30 ಬಂಕರ್‌ಗಳನ್ನು ನಾಶಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ
30 ಟ್ಯಾಂಕರ್ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಜಾಫ್ನಾದ ಉತ್ತರ ಭಾಗದಲ್ಲಿರುವ ಪ್ರಾಯದೀಪ್ ಎನ್ನುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಸೇನಾಪಡೆಗಳು ಬಂಕರ್‌ಗಳನ್ನು ನಾಶಮಾಡಿದ್ದು ವಾಯುಸೇನೆ ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದಾಗ 12 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ 25 ವರ್ಷಗಳಿಂದ ನಿರಂತರವಾಗಿ ತಮಿಳು ಉಗ್ರರ ಹಾಗೂ ಸೇನಾಪಡೆಗಳ ಮಧ್ಯೆ ಭೀಕರ ಕದನ ನಡೆದು ಸಾವಿರಾರು ನಾಗರಿಕರು, ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
|