ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರೂನಿ ವಿವಾದ;ರಾಯಲ್ ಏರ್‌ಗೆ ದಂಡ
ಫ್ರಾನ್ಸ್‌ ಅಧ್ಯಕ್ಷ ನಿಕೊಲಸ್ ಸರ್‌ಕೋಜಿ ಹಾಗೂ ಪತ್ನಿ ಕಾರ್ಲಾ ಬ್ರೂನಿ ಅವರ ಭಾವಚಿತ್ರಗಳನ್ನು ಅನುಮತಿ ಇಲ್ಲದೇ ಜಾಹೀರಾತಿನಲ್ಲಿ ಬಳಸಿದ್ದಕ್ಕಾಗಿ ಫ್ರಾನ್ಸ್‌ನ ನ್ಯಾಯಾಲಯ ವಿಮಾನಯಾನ ಸಂಸ್ಥೆ ರಾಯಲ್‌ ಏರ್‌ಗೆ ದಂಡ ವಿಧಿಸಿ ಆದೇಶಿಸಿದೆ.

ರಾಯಲ್ ‌ಏರ್‌ ವಿಮಾನಯಾನ ಸಂಸ್ಥೆ ಸಾಂಕೇತಿಕವಾಗಿ ರಾಷ್ಟ್ರಪತಿ ನಿಕೊಲಸ್ ಸುರ್ಕೋಜಿ ಅವರಿಗೆ 1 ಯುರೋ ಕಾರ್ಲಾಬ್ರೂನಿಗೆ 60ಸಾವಿರ ಯುರೋಗಳನ್ನು ದಂಡದ ರೂಪದಲ್ಲಿ ನೀಡುವಂತೆ ಆದೇಶಿಸಿದೆ. ಬ್ರೂನಿ ಅವರು 5ಲಕ್ಷ ಯುರೋಗಳನ್ನು ನೀಡುವಂತೆ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ರಾಯಲ್‌ಏರ್ ವಿಮಾನಯಾನ ಸಂಸ್ಥೆ ವಿಮಾನ ದರ ಕಡಿತ ಮಾಡುವ ಘೋಷಣೆಯ ಜಾಹೀರಾತಿನಲ್ಲಿ ನವದಂಪತಿಗಳಾದ ನಿಕೊಲಸ್ ಸುರ್ಕೋಜಿ ಮತ್ತು ಕಾರ್ಲಾಬ್ರೂನಿ ಅವರ ಭಾವಚಿತ್ರಗಳನ್ನು ಬಳಸಿಕೊಂಡಿದ್ದರು.ಈ ಜಾಹೀರಾತಿನ ವಿರುದ್ದ ದಂಪತಿಗಳು ನ್ಯಾಯಾಲಯದ ಮೊರೆ ಹೋಗಿ ಪ್ರಕರಣವನ್ನು ದಾಖಲಿಸಿದ್ದರು.

ಫ್ರಾನ್ಸ್ ರಾಷ್ಟ್ರಪತಿ ನಿಕೊಲಸ್ ಸುರ್ಕೋಜಿ ಹಾಗೂ ಇಟಲಿಯ ಸುಪರ್ ಮಾಡೆಲ್ ಫ್ರಾನ್ಸ್‌ನ ಏಲಿಸ್ ಪ್ಯಾಲೇಸ್‌ನಲ್ಲಿ ವಿವಾಹ ನಡೆಯಿತು. ಕಳೆದ ಎರಡು ತಿಂಗಳುಗಳ ಹಿಂದೆ ಪರಸ್ಪರರು ತಮ್ಮ ಪ್ರೇಮವನ್ನು ಬಹಿರಂಗಗೊಳಿಸಿದ್ದರು.ಜಗತ್ತಿನಾದ್ಯಂತ ನವದಂಪತಿಗಳ ಪ್ರೇಮ ಪ್ರಕರಣ ತೀವ್ರಕೂತುಹಲ ಕೆರಳಿಸಿದ್ದು, ಮದುವೆಯೊಂದಿಗೆ ಎಲ್ಲ ಉಹೆಗಳಿಗೆ ಅಂತಿಮ ತೆರೆ ಎಳೆದಂತಾಗಿದೆ.
ಮತ್ತಷ್ಟು
ಶ್ರೀಲಂಕಾ; ಉಗ್ರರ ವಿರುದ್ದ ಸೇನಾಕಾರ್ಯಾಚರಣೆ
ಭಾರತೀಯ ಜನಾಂಗದ ಶಾಲೆಗೆ ಮಲೇಶ್ಯಾ ಅನುದಾನ
ಬಗ್ದಾದ್ ಸಮೀಪ ಸಾಮೂಹಿಕ ಗೋರಿ ಪತ್ತೆ
ಉತ್ಕೃಷ್ಟ ಮಂಗಳವಾರ: ಮೆಕ್ ಕೆಯ್ನ್ ಮುನ್ನಡೆ
ಎರಡು ಬಾರಿ ಕತ್ತು ಕತ್ತರಿಸಿದರೂ ಸಾಯದ ಬಾತು ಕೋಳಿ!
ಅಣು ಒಪ್ಪಂದ ಭಾರತದ ಮೈಲುಗಲ್ಲು: ರೋನೆನ್ ಸೇನ್