ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋರಿಹೋದ ಹಣ ಹಿಂಪಡೆಯಲು ಮುಂದಾದ ಬಾಂಗ್ಲಾ
ಸೋರಿಹೋಗಿರುವ ಆಸ್ತಿಗಳನ್ನು ಮರಳಿ ವಶಪಡಿಸಿಕೊಳ್ಳುವ ಹತಾಶ ಕ್ರಮವಾಗಿ ಬಾಂಗ್ಲಾದೇಶದ ಮಧ್ಯಂತರ ಸರಕಾರವು ಆರು ರಾಷ್ಟ್ರಗಳೊಂದಿಗೆ ವ್ಯವಹಾರವೊಂದಕ್ಕೆ ಸಹಿಮಾಡಲು ಸಿದ್ಧವಾಗಿದೆ ಎಂದು ವರದಿಗಳು ಮತ್ತು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಮಲೇಶ್ಯ, ಸಿಂಗಾಪುರ, ಹಾಂಕಾಂಗ್, ಮತ್ತು ಯುಎಇ, ಬ್ರಿಟನ್ ಮತ್ತು ಅಮೆರಿಕಗಳೊಂದಿಗೆ ತಿಳುವಳಿಕಾ ಪತ್ರಕ್ಕೆ ಸಹಿ ಮಾಡುವುದನ್ನು ಸಮನ್ವಯಗೊಳಿಸಲು ಸರಕಾರವು 'ಕೇಂದ್ರೀಯ ಪ್ರಾಧಿಕಾರ' ಒಂದನ್ನು ರೂಪಿಸಲಿದೆ ಎಂದು ಡೇಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.

ಗೃಹ ಸಚಿವಾಲಯ, ಅಟಾರ್ನಿ ಜನರಲ್ ಕಚೇರಿ ಮತ್ತು ಇತರ ಸರಕಾರಿ ಮಂಡಳಿಗಳ ಸದಸ್ಯರನ್ನು ಪ್ರಾಧಿಕಾರವು ಒಳಗೊಳ್ಳಲಿದ್ದು, ಭ್ರಷ್ಟಾಚಾರ ವಿರೋಧಿ ಚಳುವಳಿಯ ಅಂಗವಾಗಿರುವ ಈ ಕಾರ್ಯಕ್ರಮದ ಮೂಲಕ ಹಣವನ್ನು ಮರಳಿ ಪಡೆಯುವ ಪ್ರಕ್ರಿಯೆನ್ನು ಸಮನ್ವಯಗೊಳಿಸಲಿದೆ.

ಕದ್ದು ಹೋಗಿರುವ ಆಸ್ತಿಗಳ ಪುನರ್ವಶ ಎಂಬ ಹೆಸರಿನ ತರಬೇತಿಯನ್ನು ಸುಮಾರು 10 ಸರಕಾರಿ ಅಧಿಕಾರಿಗಳು ಸ್ವಿಜರ್‌ಲ್ಯಾಂಡಿನಲ್ಲಿ ಫೆಬ್ರವರಿ 28ರಿಂದ ಮಾರ್ಚ್ 10ರ ತನಕ ಪಡೆಯಲಿದ್ದಾರೆ. ಈ ಕಾರ್ಯಕ್ಕೆ ವಿಶ್ವಬ್ಯಾಂಕು ಹಣಕಾಸು ಒದಗಿಸಲಿದೆ.
ಮತ್ತಷ್ಟು
ಬ್ರೂನಿ ವಿವಾದ;ರಾಯಲ್ ಏರ್‌ಗೆ ದಂಡ
ಶ್ರೀಲಂಕಾ; ಉಗ್ರರ ವಿರುದ್ದ ಸೇನಾಕಾರ್ಯಾಚರಣೆ
ಭಾರತೀಯ ಜನಾಂಗದ ಶಾಲೆಗೆ ಮಲೇಶ್ಯಾ ಅನುದಾನ
ಬಗ್ದಾದ್ ಸಮೀಪ ಸಾಮೂಹಿಕ ಗೋರಿ ಪತ್ತೆ
ಉತ್ಕೃಷ್ಟ ಮಂಗಳವಾರ: ಮೆಕ್ ಕೆಯ್ನ್ ಮುನ್ನಡೆ
ಎರಡು ಬಾರಿ ಕತ್ತು ಕತ್ತರಿಸಿದರೂ ಸಾಯದ ಬಾತು ಕೋಳಿ!