ದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿದ್ದ ಉತ್ತರ ಇರಾಕ್‌ನಲ್ಲಿರುವ ಶಿಯಾ ಪಂಗಡದ ಆರಾಧಾನ ಸ್ಥಳದ ಪುನರ್ನಿಮಾಣವನ್ನು ಆರಂಭಿಸಲಾಗಿದ್ದು, ಇರಾಕ್ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ಇಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಚಿನ್ನದ ಗುಮ್ಮಟ ಹೊಂದಿದ್ದ ಈ ಮಸೀದಿಯ ಮೇಲೆ ದಾಳಿ ನಡೆದಿದು ಎರಡು ವರ್ಷಗಳು ಸಂದಿವೆ. ಇದರ ಮೇಲಿನ ದಾಳಿಯು ಪಂಥೀಯ ಹಿಂಸಾಚಾರಕ್ಕೆ ನಾಂದಿ ಹಾಡಿತ್ತು. ಸುನ್ನಿ ಮತ್ತು ಶಿಯಾ ಪಂಗಡಗಳ ನಡುವೆ ನಡೆಯುತ್ತಿರುವ ನಿರಂತರ ದಾಳಿಯು ಇರಾಕನ್ನು ಯುದ್ಧದಂಚಿಗೆ ತಂದು ನಿಲ್ಲಿಸಿದೆ.
ಕಳೆದ ಜೂನ್ 13ರಂದು ನಡೆಸಲಾಗಿದ ಇನ್ನೊಂದು ದಾಳಿಯು ಅವಳಿ ಮಿನಾರ್‌ಗಳನ್ನು ಉರುಳಿಸಿತ್ತು. ಇದಾದ ಬಳಿಕ ಶಿಯಾ ಧರ್ಮಗುರುಗಳು ಈ ಧಾರ್ಮಿಕ ಕೇಂದ್ರದ ಪುನರ್ನಿಮಾಣಕ್ಕೆ ಒತ್ತಾಯಿಸಿದ್ದರು.
ಮಸೀದಿ ಸಂಕೀರ್ಣದಲ್ಲಿ 9ನೆ ಶತಮಾನಕ್ಕೆ ಸೇರಿದ ಇಬ್ಬರು ಇಮಾಮರ ಸಮಾಧಿಯಿದ್ದು, ಇವರು ಪ್ರವಾದಿ ಮಹಮ್ಮದ್ ಅವರ ವಂಶಜರೆಂದು ಹೇಳಲಾಗಿದ್ದು, ಇವರನ್ನು ಶಿಯಾ ಪಂಗಡವು ಪ್ರವಾದಿಯವರ ಉತ್ತರಾಧಿಕಾರಿಗಳೆಂದು ಪರಿಗಣಿಸಿದೆ.
|