ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿಪಿಪಿ ಪ್ರಧಾನಿ ಅಭ್ಯರ್ಥಿಯಾಗುವುದಿಲ್ಲ: ಜರ್ದಾರಿ
ಪಾಕಿಸ್ತಾನದಲ್ಲಿ ಇದೇ ತಿಂಗಳ 18ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೂ ತಾನು ಪಕ್ಷದ ಭಾವಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗ ಬಯಸುವುದಿಲ್ಲ ಎಂದು ಪಿಪಿಪಿಯ ಸಹ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಪತಿ ಅಸಿಱ್ ಆಲಿ ಝರ್ಧಾರಿ ಹೇಳಿದ್ದಾರೆ.

ಪ್ರಧಾನಿ ಸ್ಥಾನವನ್ನು ಅಲಂಕರಿಸುವಂತೆ ಬಾಬರ್ ಅವನ್ ಅವರು ವೈಯಕ್ತಿಕ ನೆಲೆಯಲ್ಲಿ ಹೇಳಿದ್ದಾರೆ ಮತ್ತು ಅವರ ಈ ಹೇಳಿಕೆಯು ಪಕ್ಷದ ನಿರ್ಧಾರವಲ್ಲ ಎಂದು ಜರ್ದಾರಿ ಸ್ಪಷ್ಟಪಡಿಸಿದ್ದಾರೆ. ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಜರ್ದಾರಿ ಭಾವಿ ಪ್ರಧಾನ ಮಂತ್ರಿ ಎಂಬುದಾಗಿ ಸೋಮವಾರ ನ್ಯೂಸ್‌ವೀಕ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಲಾಗಿತ್ತು.

ತನ್ನ ಪಕ್ಷವು ಅಧಿಕಾರಕ್ಕೆ ಬಂದಲ್ಲಿ 1973ರ ಸಂವಿಧಾನದಲ್ಲಿರುವ ಎಲ್ಲ ಜನವಿರೋಧಿ ತಿದ್ದುಪಡಿಗಳನ್ನು ತೊಡೆದು ಹಾಕುವುದಾಗಿ ಅವರು ಸ್ಪಷ್ಟಪಡಿಸಿದರು.

ಸಂವಿಧಾನವು ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಷ್ಟ್ರದ ಜನತೆಯಿಂದ ಗುರುತಿಸಲ್ಪಟ್ಟ ಒಂದು ಸಮಗ್ರ ದಾಖಲೆ, ಇದನ್ನು ತಮ್ಮ ದುರಾಚಾರ ಮತ್ತು ಕಾನೂನು ಬಾಹಿರ ಅವಧಿಯನ್ನು ಮುಂದೂಡಲು ತಿದ್ದುಪಡಿಗಳ ಮೇಲೆ ತಿದ್ದುಪಡಿ ತಂದು ನಾಶಮಾಡಲಾಗಿದೆ ಎಂದು ಅವರು ಆಪಾದಿಸಿದರು.

ತನ್ನ ಹತ್ಯೆಯಾಗುತ್ತದೆ ಎಂಬ ಅರಿವಿದ್ದರೂ, ಬೇನಜೀರ್ ಭುಟ್ಟೋ, ತನ್ನ ಜೀವವನ್ನು ಅಪಾಯಕ್ಕೊಡ್ಡಿ ಒಕ್ಕೂಟ ಮತ್ತು ಪಾಕಿಸ್ತಾನದ ಜನತೆಯ ಸಂವಿಧಾನ ಹಕ್ಕುಗಳನ್ನು ರಕ್ಷಿಸಲು ಪಾಕಿಸ್ತಾನಕ್ಕೆ ಮರಳುವ ಧೈರ್ಯವಹಿಸಿದರು ಎಂದು ಜರ್ದಾರಿ ಈ ಸಂದರ್ಭದಲ್ಲಿ ನುಡಿದರು.

ಪಿಎಂಎಲ್-ಕ್ಯೂ ಒಂದು ಪಕ್ಷವೇ ಅಲ್ಲ ಎಂದು ಟೀಕಿಸಿದ ಅವರು, ಬದಲಿಗೆ ಇದೊಂದು ಸ್ವಯಂ ಕೇಂದ್ರೀಕೃತ ರಾಜಕೀಯ ಅನಾಥರ ಸಮೂಹ ಎಂದು ವ್ಯಂಗ್ಯವಾಡಿದರು.
ಮತ್ತಷ್ಟು
ಸಮರ್ರ ಮಸೀದಿ ಪುನರ್ನಿಮಾಣ ಆರಂಭ
ಸೋರಿಹೋದ ಹಣ ಹಿಂಪಡೆಯಲು ಮುಂದಾದ ಬಾಂಗ್ಲಾ
ಬ್ರೂನಿ ವಿವಾದ;ರಾಯಲ್ ಏರ್‌ಗೆ ದಂಡ
ಶ್ರೀಲಂಕಾ; ಉಗ್ರರ ವಿರುದ್ದ ಸೇನಾಕಾರ್ಯಾಚರಣೆ
ಭಾರತೀಯ ಜನಾಂಗದ ಶಾಲೆಗೆ ಮಲೇಶ್ಯಾ ಅನುದಾನ
ಬಗ್ದಾದ್ ಸಮೀಪ ಸಾಮೂಹಿಕ ಗೋರಿ ಪತ್ತೆ