ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದ್ಯವೆ ಭುಟ್ಟೋ ಹತ್ಯೆ ತನಿಖಾ ವರದಿ ಸಲ್ಲಿಕೆ
PTI
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ತನಿಖೆ ನಡೆಸುತ್ತಿದ್ದ ಬ್ರಿಟನ್ನಿನ ಸ್ಕಾಟ್‌ಲ್ಯಾಂಡ್ ಯಾರ್ಡ್‌ನ ತಂಡವೊಂದು ಈ ವಾರದಲ್ಲಿ ತನ್ನ ವರದಿಯನ್ನು ಪಾಕಿಸ್ತಾನ ಅಧಿಕಾರಿಗಳಿಗೆ ಸಲ್ಲಿಸಲಿದೆ.

ಬ್ರಿಟಿಷ್ ಪತ್ತೆದಾರರ ಮೂರು ಮಂದಿಯ ತಂಡವೊಂದು ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಗುರುವಾರ ಮುಂಜಾನೆ ಇಲ್ಲಿಗೆ ಬಂದಿಳಿದಿದೆ. ಅವರನ್ನು ಬ್ರಿಟಿಷ್ ಹೈ ಕಮಿಷನ್‌ನ ಅಧಿಕಾರಿಗಳು ಬರಮಾಡಿಕೊಂಡಿದ್ದು, ಬಿಗಿ ಭದ್ರತೆಯಲ್ಲಿ ಕರೆದೊಯ್ದರು.

ಈ ತಂಡದೊಂದಿಗೆ ಮಾತನಾಡಲು ಕಾಯುತ್ತಿದ್ದ ಪತ್ರಕರ್ತರಿಗೆ ಮಾತನಾಡಲು ಅವಕಾಶ ನೀಡದಂತೆ ಪೊಲೀಸ್ ಬೆಂಗಾವಲು ತಂಡ ಕರೆದೊಯ್ದಿತು.

ತನಿಖಾ ತಂಡವು ಈ ಭುಟ್ಟೋ ಹತ್ಯೆಗೆ ಸಂಬಂಧಿಸಿದಂತೆ ತನ್ನ ತನಿಖಾ ವರದಿಯನ್ನು ಈ ವಾರದಲ್ಲಿ ಸಲ್ಲಿಸಲಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದಾರೆ. ಭುಟ್ಟೋ ಹತ್ಯೆಯ ಬಳಿಕ ಪಾಕಿಸ್ತಾನಿ ಅಧ್ಯಕ್ಷ ಪರ್ವೇಜ್ ಮುಶರಫ್ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರ ನೆರವು ಯಾಚಿಸಿದ್ದು, ಜನವರಿ ನಾಲ್ಕರಂದು ಬ್ರಿಟನ್ ಮೆಟ್ರೋಪಾಲಿಟನ್ ಪೊಲೀಸ್ ವಿಭಾಗದ ಫಾರೆನ್ಸಿಕ್, ಕಂಪ್ಯೂಟರ್ ಮತ್ತು ಸ್ಫೋಟ ತಜ್ಞರ ತಂಡವು ಪಾಕಿಸ್ತಾನಕ್ಕೆ ಆಗಮಿಸಿತ್ತು.

ಕಳೆದ ಡಿಸೆಂಬರ್ 27ರಂದು ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡಿ ತೆರಳುವ ವೇಳೆಗೆ ನಡೆದ ಆತ್ಮಾಹುತಿ ದಾಳಿಯಲ್ಲಿ ಭುಟ್ಟೋ ಹತ್ಯೆಯಾಗಿತ್ತು.
ಮತ್ತಷ್ಟು
ಪಿಪಿಪಿ ಪ್ರಧಾನಿ ಅಭ್ಯರ್ಥಿಯಾಗುವುದಿಲ್ಲ: ಜರ್ದಾರಿ
ಸಮರ್ರ ಮಸೀದಿ ಪುನರ್ನಿಮಾಣ ಆರಂಭ
ಸೋರಿಹೋದ ಹಣ ಹಿಂಪಡೆಯಲು ಮುಂದಾದ ಬಾಂಗ್ಲಾ
ಬ್ರೂನಿ ವಿವಾದ;ರಾಯಲ್ ಏರ್‌ಗೆ ದಂಡ
ಶ್ರೀಲಂಕಾ; ಉಗ್ರರ ವಿರುದ್ದ ಸೇನಾಕಾರ್ಯಾಚರಣೆ
ಭಾರತೀಯ ಜನಾಂಗದ ಶಾಲೆಗೆ ಮಲೇಶ್ಯಾ ಅನುದಾನ