ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಜಾಗೆ ವಿದ್ಯುತ್ ಕಡಿತ ಆರಂಭ
ಕಠಿಣ ಆರ್ಥಿಕ ಸಂಬಂಧಗಳ ಯೋಜನೆಯ ಅಂಗವಾಗಿ ಇಸ್ರೇಲ್, ಗಾಜಾಪಟ್ಟಿಗೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲು ಆರಂಭಿಸಿರುವುದಾಗಿ ಇಸ್ರೇಲ್‌ನ ರಕ್ಷಣಾ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕಳೆದ ಜೂನ್‌ನಿಂದ ಹಮಸ್ ಉಗ್ರವಾದಿಗಳ ಆಡಳಿತಕ್ಕೊಳಪಟ್ಟಿರುವ ಇಸ್ರೇಲ್, ಗಾಜಾಪಟ್ಟಿಯ ಮೇಲೆ ಒತ್ತಡ ಹೆಚ್ಚಿಸಲು ಕೈಗೊಂಡಿರುವ ಸರಣಿ ಕ್ರಮಗಳಲ್ಲಿ ಇದು ಇತ್ತೀಚಿನದ್ದಾಗಿದೆ.

ಗಾಜಾಪಟ್ಟಿಗೆ ಪೂರೈಸುತ್ತಿರುವ 10 ಹೈಪವರ್ ಲೈನ್‌ನಲ್ಲಿ ಶೇ 5ರಷ್ಟು ವಿದ್ಯುತ್ ಕಡಿತಮಾಡಲಾಗಿದೆ ಎಂದು ರಕ್ಷಣಾ ಸಚಿವ ಎಹುದ್ ಬಾರಕ್ ಅವರ ವಕ್ತಾರರು ಹೇಳಿದ್ದಾರೆ.

"ಇದು ಗಾಜಾದಲ್ಲಿ ಪ್ಯಾಲೆಸ್ತೀನಿಯರ ವರ್ತನೆಯನ್ನು ಪರೀಕ್ಷಿಸಲು ನೀಡಿರುವ ಸುಳಿವು. ಮತ್ತು ಇದನ್ನು ಮುಂದುವರಿಸಲು ನಾವು ಇಚ್ಛಿಸುತ್ತೇವೆ. ಅವರು ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುವ ಬದಲಿಗೆ, ತಮ್ಮ ಪ್ರಯತ್ನಗಳನ್ನು ಹೊಸ ಇಂಧನ ಮೂಲಗಳನ್ನು ಪಡೆಯುವತ್ತ ಕೇಂದ್ರೀಕರಿಸಬಹುದೆಂದು ಆಶಿಸುತ್ತೇವೆ" ಎಂದು ವಕ್ತಾರ ಶ್ಲೋಮೊ ಡ್ರೋರ್ ಹೇಳಿದ್ದಾರೆ.

"ಗಾಜಾ ಪಟ್ಟಿಯು ಇಸ್ರೇಲನ್ನು ಹಲವಾರು ರಂಗಗಳಲ್ಲಿ ಅವಲಂಬಿಸಿರುವುದನ್ನು ಕಡಿಮೆಗೊಳಿಸಲು ಇಸ್ರೇಲ್ ಬಯಸುತ್ತಿದೆ. ನಾವು ಸೂಕ್ತ ಹಾಗೂ ಸರಿಯಾದ ರೀತಿಯಲ್ಲಿ ವರ್ತಿಸುತ್ತಿದ್ದೇವೆ ಎಂದು ಹೈಕೋರ್ಟ್ ಹೇಳಿದೆ" ಎಂದು ಇಸ್ರೇಲ್‌ನ ಉಪ ರಕ್ಷಣಾ ಸಚಿವ ಮತಾನ್ ವಿಲ್‌ನಯ್ ಹೇಳಿದ್ದಾರೆ.
ಮತ್ತಷ್ಟು
ಸ್ಫೋಟದ ತೀವ್ರತೆಯಿಂದ ಭುಟ್ಟೋ ಸಾವು: ವರದಿ
ಸದ್ಯವೆ ಭುಟ್ಟೋ ಹತ್ಯೆ ತನಿಖಾ ವರದಿ ಸಲ್ಲಿಕೆ
ಪಿಪಿಪಿ ಪ್ರಧಾನಿ ಅಭ್ಯರ್ಥಿಯಾಗುವುದಿಲ್ಲ: ಜರ್ದಾರಿ
ಸಮರ್ರ ಮಸೀದಿ ಪುನರ್ನಿಮಾಣ ಆರಂಭ
ಸೋರಿಹೋದ ಹಣ ಹಿಂಪಡೆಯಲು ಮುಂದಾದ ಬಾಂಗ್ಲಾ
ಬ್ರೂನಿ ವಿವಾದ;ರಾಯಲ್ ಏರ್‌ಗೆ ದಂಡ