ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೊ ಹತ್ಯೆ ತನಿಖಾ ವರದಿ ಸಲ್ಲಿಕೆ
ಚುನಾವಣಾ ರಾಲಿ ಮುಗಿಸಿ ತೆರಳುತ್ತಿದ್ದ ವೇಳೆ ಉಗ್ರರ ದಾಳಿಯಲ್ಲಿ ಅಸು ನೀಗಿದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯಾ ಪ್ರಕರಣದ ತನಿಖೆ ನಡೆಸಿರುವ ಬ್ರಿಟನ್ನಿನ ಸ್ಕಾಟ್‌ಲ್ಯಾಂಡ್ ಯಾರ್ಡ್ ತನಿಖಾ ತಂಡವು ಪಾಕಿಸ್ತಾನದ ಆಂತರಿಕ ಸಚಿವಾಲಯಕ್ಕೆ ಶುಕ್ರವಾರ ತನ್ನ ವರದಿ ಸಲ್ಲಿಸಿದೆ.

ಮಾಜಿ ಪ್ರಧಾನಿ ಸಾವಿಗೆ ಗುಂಡೇಟು ಕಾರಣವಲ್ಲ ಎಂಬ ಸರಕಾರದ ಏಜೆನ್ಸಿಗಳ ಈ ಹಿಂದಿನ ಹೇಳಿಕೆಗೆ ಪುಷ್ಠಿ ನೀಡಿರುವ ವರದಿಯು, ಬಾಂಬ್ ಸ್ಪೋಟದ ತೀವ್ರತೆ ಸಾವಿಗೆ ಕಾರಣ ಎಂದಿದೆ.

ಬೆನಜೀರ್ ಅವರ ಹತ್ಯೆಗಾಗಿ ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ದುಷ್ಕರ್ಮಿಗಳು ಆತ್ಮಾಹುತಿ ಬಾಂಬ್ ದಾಳಿ ಹಾಗೂ ಗುಂಡೇಟಿನ ದಾಳಿ ನಡೆಸಿದ್ದರು. ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಶರಫ್ ಅವರು ಹತ್ಯಾ ಪ್ರಕರಣದ ತನಿಖೆಗಾಗಿ ಬ್ರಿಟಿಷ್ ಸರಕಾರದ ಸಹಾಯ ಯಾಚಿಸಿದ್ದರು. ಎರಡು ವಾರಕ್ಕಿಂತಲೂ ಹೆಚ್ಚಿನ ಸಮಯ ವಿನಿಯೋಗಿಸಿರುವ ಬ್ರಿಟಿಷ್ ತಜ್ಞರು ಈ ಅಂಶವನ್ನು ಪತ್ತೆ ಹಚ್ಚಿದ್ದಾರೆ.

ಈ ದಾಳಿಯಲ್ಲಿ ಒಬ್ಬನೇ ಶಂಕಿತ ಒಳಗೊಂಡಿದ್ದಾನೆ ಎಂದು ವರದಿ ಹೇಳಿದೆ. ಆತ್ಮಾಹುತಿ ಬಾಂಬರ್, ಬಾಂಬ್ ಸ್ಫೋಟಿಸುವ ಮುನ್ನ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಿರುವ ವರದಿ, ದಾಳಿಯ ವೇಳೆಗೆ ಈ ವ್ಯಕ್ತಿ ಭುಟ್ಟೋ ವಾಹನದ ಅತ್ಯಂತ ಸಮೀಪ ನಿಂತಿದ್ದ, ಸ್ಫೋಟದಿಂದಾಗಿ ಆಕೆಯ ತಲೆಯು ವಾಹನದ ರಕ್ಷಣಾ ಕವಚದ ಲೋಹಕ್ಕೆ ಬಡಿದಿದ್ದು ಮಾರಣಾಂತಿಕ ಗಾಯ ಉಂಟಾಗಿದೆ ಎಂದು ಹೇಳಿದೆ.
ಮತ್ತಷ್ಟು
ಗಾಜಾಗೆ ವಿದ್ಯುತ್ ಕಡಿತ ಆರಂಭ
ಸ್ಫೋಟದ ತೀವ್ರತೆಯಿಂದ ಭುಟ್ಟೋ ಸಾವು: ವರದಿ
ಸದ್ಯವೆ ಭುಟ್ಟೋ ಹತ್ಯೆ ತನಿಖಾ ವರದಿ ಸಲ್ಲಿಕೆ
ಪಿಪಿಪಿ ಪ್ರಧಾನಿ ಅಭ್ಯರ್ಥಿಯಾಗುವುದಿಲ್ಲ: ಜರ್ದಾರಿ
ಸಮರ್ರ ಮಸೀದಿ ಪುನರ್ನಿಮಾಣ ಆರಂಭ
ಸೋರಿಹೋದ ಹಣ ಹಿಂಪಡೆಯಲು ಮುಂದಾದ ಬಾಂಗ್ಲಾ