ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಕಾ: ಮಿಲಿಟರಿ ಕಾರ್ಯಾಚರಣೆ 49 ಸಾವು
ಎಲ್‌ಟಿಟಿಇ ಮತ್ತು ಶ್ರೀಲಂಕಾ ಸೇನಾ ಪಡೆ ನಡುವೆ ಶುಕ್ರವಾರ ನಡೆದ ವಿವಿಧ ಹೋರಾಟಗಳಲ್ಲಿ ಒಟ್ಟು 49 ಜನರು ಸತ್ತಿರುವುದು ವರದಿಯಾಗಿದೆ.

ಉತ್ತರ-ಪೂರ್ವ ಭಾಗದ ಮನ್ನಾರ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ, 12 ಉಗ್ರರು ಮತ್ತು ಇಬ್ಬರು ಸೈನಿಕರು ಮಡಿದಿರುವುದಾಗಿ ರಾಷ್ಟ್ರೀಯ ಭದ್ರತೆಯ ಮಾಧ್ಯಮ ಕೇಂದ್ರ ಹೇಳಿದೆ.

ಜಾಫ್ನಾ ಪ್ರಾಂತ್ಯದಲ್ಲಿ ಮತ್ತೊಂದು ಜಗಳದಲ್ಲಿ 4 ಉಗ್ರರರನ್ನು ಸೇನೆ ಕೊಂದು ಹಾಕಿದ್ದು, ಮನ್ನಾರ್ ಪ್ರಾಂತ್ಯದ ಶ್ರೀಕುಲಂ ಎಂಬಲ್ಲಿಯೂ ಇಬ್ಬರು ಉಗ್ರರನ್ನು ಹತ್ಯೆಯಾಗಿದ್ದಾರೆ ಎಂದು ತಿಳಿಯಲಾಗಿದೆ.

ಇದೇ ರೀತಿ, ನಾರಿಕುಲಂನಲ್ಲಿ ಇಬ್ಬರು, ವವುನೀಯಾ ಪ್ರಾಂತ್ಯದಲ್ಲಿ ಮೂವರು, ನವಟ್ ಕುಲಂನಲ್ಲಿ ಇಬ್ಬರು ಉಗ್ರರನ್ನು ಬಲಿತೆಗೆದುಕೊಳ್ಳುವಲ್ಲಿ ಸೇನೆ ಸಫಲವಾಗಿದೆ ಎಂದು ಶ್ರೀಲಂಕಾ ಸೇನಾ ವಕ್ತಾರರು ತಿಳಿಸಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಲಂಕಾದಲ್ಲಿ ತಮಿಳು ಉಗ್ರರ ಶಕ್ತಿ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಉಗ್ರರ ಹುಟ್ಟಡಗಿಸುವಲ್ಲಿ ಸೇನಾ ಪಡೆ ಸೇನೆ ಸಫಲವಾಗುತ್ತಿದೆ.
ಮತ್ತಷ್ಟು
ಭುಟ್ಟೊ ಹತ್ಯೆ ತನಿಖಾ ವರದಿ ಸಲ್ಲಿಕೆ
ಗಾಜಾಗೆ ವಿದ್ಯುತ್ ಕಡಿತ ಆರಂಭ
ಸ್ಫೋಟದ ತೀವ್ರತೆಯಿಂದ ಭುಟ್ಟೋ ಸಾವು: ವರದಿ
ಸದ್ಯವೆ ಭುಟ್ಟೋ ಹತ್ಯೆ ತನಿಖಾ ವರದಿ ಸಲ್ಲಿಕೆ
ಪಿಪಿಪಿ ಪ್ರಧಾನಿ ಅಭ್ಯರ್ಥಿಯಾಗುವುದಿಲ್ಲ: ಜರ್ದಾರಿ
ಸಮರ್ರ ಮಸೀದಿ ಪುನರ್ನಿಮಾಣ ಆರಂಭ