ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಹಪಾಠಿಗಳನ್ನು ಕೊಂದು ತಾನೂ ಸತ್ತಳು
ಲೌಸಿಯಾನದ ತಾಂತ್ರಿಕ ಕಾಲೇಜೊಂದರ ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನಿಬ್ಬರು ಸಹಪಾಠಿಗಳನ್ನು ಗುಂಡಿಕ್ಕಿ ಕೊಂದು ತಾನೂ ಗುಂಡುಹಾರಿಸಿಕೊಂಡು ಸತ್ತಿರುವುದಾಗಿ ವರದಿಯಾಗಿದೆ.

ಕಾಲೇಜು ಕಟ್ಟಡದ ಎರಡನೆ ಮಹಡಿಯಲ್ಲಿದ್ದ ತರಗತಿ ಕೋಣೆಯಲ್ಲಿ ಈ ಹುಡುಗಿಯರು ಕುಳಿತಿದ್ದ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಸತ್ತವರಲ್ಲಿ ಒಬ್ಬಾಕೆಯೇ ಹಂತಕಿಯಾಗಿರಬೇಕು ಎಂಬುದಾಗಿ ಪೊಲೀಸರು ಹೇಳಿದ್ದಾರೆ.

ಅಮೆರಿಕದಲ್ಲಿ ಹೆಚ್ಚುತ್ತಿರುವ ಗುಂಡುಹಾರಾಟ ಪ್ರಕರಣಗಳಲ್ಲಿ ಇದು ಇತ್ತೀಚಿನದ್ದಾಗಿದೆ. ಇದೇ ದಿನದಂದು ಮಿಸ್ಸೋರಿ ಮಂಡಳಿ ಸಭೆಯಲ್ಲಿ ಬಂಧೂಕುದಾರಿಯೊಬ್ಬ ಗುಂಡುಹಾರಿಸಿ ಐದು ಮಂದಿಯನ್ನು ಹತ್ಯೆ ಮಾಡಿದ್ದಾನೆ. ಈ ಹಂತಕ ಬಳಿಕ ಪೊಲೀಸರ ಗುಂಡಿಗೆ ಬಲಿಯಾದ.

ಗುರುವಾರ ನಡೆದ ಇನ್ನೊಂದು ಪ್ರಕರಣದಲ್ಲಿ ಒಹಿಯೋದ ಶಾಲೆಯೊಂದರಲ್ಲಿ ಆಕ್ರೋಶಿತ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ವಿದ್ಯಾರ್ಥಿನಿಯರ ಎದುರೇ ಗುಂಡಿಟ್ಟು ಗಾಯಗೊಳಿಸಿದ್ದಾನೆ. ಬಳಿಕ ಪೊಲೀಸರೊಂದಿಗೆ ನಡೆದ ಘರ್ಷಣೆಯ ಬಳಿಕ ತನಗೇ ಗುಂಡುಹಾರಿಸಿಕೊಂಡಿದ್ದಾನೆ.
ಮತ್ತಷ್ಟು
ಪ್ರಚಾರದ ವೇಳೆ ತಪ್ಪಾಗಿದೆ ಎಂದ ಬಿಲ್ ಕ್ಲಿಂಟನ್
ಲಂಕಾ: ಮಿಲಿಟರಿ ಕಾರ್ಯಾಚರಣೆ 49 ಸಾವು
ಭುಟ್ಟೊ ಹತ್ಯೆ ತನಿಖಾ ವರದಿ ಸಲ್ಲಿಕೆ
ಗಾಜಾಗೆ ವಿದ್ಯುತ್ ಕಡಿತ ಆರಂಭ
ಸ್ಫೋಟದ ತೀವ್ರತೆಯಿಂದ ಭುಟ್ಟೋ ಸಾವು: ವರದಿ
ಸದ್ಯವೆ ಭುಟ್ಟೋ ಹತ್ಯೆ ತನಿಖಾ ವರದಿ ಸಲ್ಲಿಕೆ