ಅಮೆರಿಕ ವಿದೇಶಾಂಗ ಖಾತೆಯ ಅಧೀನ ಕಾರ್ಯದರ್ಶಿ ನಿಕೋಲಸ್ ಬರ್ನ್ಸ್, ಪರಮಾಣು ಒಪ್ಪಂದದ ವಿಚಾರದಲ್ಲಿ ಸಮಯ ಪೋಲಾಗುತ್ತಿದೆ ಎಂಬುದಾಗಿ ಅಸಮಧಾನ ವ್ಯಕ್ತಪಡಿಸಿದ್ದು, ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ಈ ವರ್ಷದೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಭಾರತವು ಅಂತಾರಾಷ್ಟ್ರೀಯ ಅನುಮೋದನೆಯನ್ನು ಆದಷ್ಟು ಬೇಗನೆ ಪಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತವು ಪರಮಾಣು ಶಸ್ತಾಸ್ತ್ರಗಳನ್ನು ಪರೀಕ್ಷಿಸಿ, ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಲೂ ನಿರಾಕರಿಸಿದರೂ, 30 ವರ್ಷಗಳಲ್ಲಿ ಮೊದಲ ಬಾರಿಗೆ ನಾಗರಿಕ ಪರಮಾಣು ಒಪ್ಪಂದವು ಭಾರತಕ್ಕೆ ಅಮೆರಿಕ ಇಂಧನ ಮತ್ತು ಸಾಮಾಗ್ರಿಗಳ ಉಪಯೋಗಕ್ಕೆ ದಾರಿ ಮಾಡಿಕೊಡುತ್ತಿದೆ.
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಕ್ಕೆ ಈ ಒಪ್ಪಂದವು ತಳಹದಿಯಾಗಲಿದೆ ಎಂದು ಸಿದ್ಧಾಂತ ಪ್ರತಿಪಾದಕರು ವಾದಿಸಿದ್ದರೂ, ಪರಮಾಣು ಶಸ್ತ್ರಾಸ್ತ್ರದ ಹರಡುವಿಕೆಯನ್ನು ನಿರ್ಮೂಲನ ಮಾಡಲು ಜಾಗತಿಕ ಪದ್ಧತಿಯ ರಚನೆಯನ್ನು ದುರ್ಬಲಗೊಳಿಸಲಿದೆ ಎಂಬ ಪರಮಾಣು ನಿಶ್ಯಸ್ತ್ರೀಕರಣ ವಾದಿಗಳು ನಂಬಿರುವುದರಿಂದ, ಕೆಲವು ಭಾರತೀಯರು ನಾಗರಿಕ ಪರಮಾಣು ಒಪ್ಪಂದವು ನಮ್ಮ ಸ್ವತಂತ್ರಕ್ಕೆ ಭಂಗ ಉಂಟುಮಾಡುತ್ತದೆ ಎಂಬುದಾಗಿ ತಿಳಿದುಕೊಂಡಿದ್ದಾರೆ.
"ಸಮಯವು ಹಾಳಾಗುತ್ತಿದೆ. ಈ ವರ್ಷ ಚುನಾವಣೆ ನಡೆಯಲಿರುವುದರಿಂದ, ನಾವು ಹೆಚ್ಚು ಸಮಯವನ್ನು ಹೊಂದಿಲ್ಲ.ಆದ್ದರಿಂದ ಒಪ್ಪಂದವು ತ್ವರಿತವಾಗಿ ಸಾಗುತ್ತದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ" ಎಂದು ಬರ್ನ್ಸ್ ಆಶಯ ವ್ಯಕ್ತಪಡಿಸಿದ್ದಾರೆ.
"ಈ ಒಪ್ಪಂದವು ಆದಷ್ಟು ಬೇಗ ಮುಂದುವರಿಯುವ ಅಗತ್ಯವಿದೆ. ಅನೇಕ ತಿಂಗಳುಗಳ ಕಾಲ ಈ ಒಪ್ಪಂದವನ್ನು ಸ್ಥಗಿತಗೊಳಿಸಲಾಗಿತ್ತು. ಈ ಒಪ್ಪಂದವನ್ನು ಭಾರತೀಯರು ಆದಷ್ಟು ಬೇಗನೇ ಮುಂದುವರಿಸುವ ಪ್ರಯತ್ನವನ್ನು ಮಾಡುತ್ತಾರೆ ಎಂಬ ಭರವಸೆಯನ್ನು ಹೊಂದಿದ್ದೇನೆ. ಇದು ಭಾರತೀಯ ಸರಕಾರದ ಮೇಲೆ ಅವಲಂಬಿತವಾಗಿದೆ" ಎಂದು ಬರ್ನ್ಸ್ ಸ್ಪಷ್ಟಪಡಿಸಿದ್ದಾರೆ.
|