ಇಂಗ್ಲೆಂಡಿನ ಹೊಸ ವಲಸೆ ನಿಯಮಾವಳಿಗಳ ಬಗ್ಗೆ ಭಾರತೀಯ ವೈದ್ಯ ವೃಂದದ ಕಳವಳದ ಹಿನ್ನೆಲೆಯಲ್ಲಿ, ಈ ಪ್ರಯತ್ನವು ದೊಡ್ಡ ಮಟ್ಟದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಮರ್ಥಿಸಿಕೊಂಡಿರುವ ಬ್ರಿಟನ್, ಮುಖ್ಯವಾಗಿ ಪ್ರಕ್ರಿಯೆಯನ್ನು ಸರಳ ಮತ್ತು ಪಾರದರ್ಶಕಗೊಳಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದೆ.
ಹೊಸ ವ್ಯವಸ್ಥೆಯಿಂದ ದೊಡ್ಡ ಮಟ್ಟಿನಲ್ಲೇನೂ ಪರಿಣಾಮವಾಗುವುದಿಲ್ಲ ಎಂದು ಬ್ರಿಟಿಷ್ ರಾಯಭಾರಿ ರಿಚರ್ಡ್ ಸ್ಟಾಗ್ ಅವರು ತಿಳಿಸಿದ್ದಾರೆ. ಹೊಸ ವಲಸೆ ನೀತಿಯು ಬ್ರಿಟನ್‌ನಲ್ಲಿ ಫೆ.29ರಿಂದ ಜಾರಿಗೆ ಬರಲಿದೆ.
ನಮ್ಮ ನಡವಳಿಕೆಯಲ್ಲಿನ ಮೂಲಭೂತ ಬದಲಾವಣೆಗಿಂತಲೂ ಇದು ವೀಸಾ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶವನ್ನಷ್ಟೇ ಹೊಂದಿದೆ ಎಂದು ಅವರು ಹೇಳಿದರು.
ಈಗ ಬ್ರಿಟನ್‌ನಲ್ಲಿರುವ ತಜ್ಞ ವಿದೇಶೀಯರು, ಬ್ರಿಟನ್‌ನಲ್ಲಿ ಮುಂದುವರಿಯಲು ಇಚ್ಛಿಸಿದರೆ, ಅವರು ಹೊಸ ವ್ಯವಸ್ಥೆಯ ಅನುಸಾರ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಬ್ರಿಟಿಷ್ ಗೃಹ ಇಲಾಖೆಯು ಎರಡು ದಿನಗಳ ಹಿಂದೆ ಆದೇಶ ಹೊರಡಿಸಿತ್ತು.
|