ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿನಲ್ಲಿ 11 ಭಾರತೀಯ ಮೀನುಗಾರರ ಸೆರೆ
ಜಲಪ್ರದೇಶದ ಗಡಿ ದಾಟಿ ಬಂದಿದ್ದ ಆರೋಪದಲ್ಲಿ ಪಾಕಿಸ್ತಾನವು 11 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರಿಂದ ಎರಡು ಬೋಟುಗಳನ್ನು ವಶಪಡಿಸಿಕೊಂಡಿದೆ.

ಅರಬ್ಬೀ ಸಮುದ್ರ ತೀರದ ಕರಾಚಿ ಬಂದರುಪಟ್ಟಣದಲ್ಲಿ ಮೀನುಗಾರರನ್ನು ಬಂಧಿಸಿರುವ ಪಾಕಿಸ್ತಾನದ ಸಮುದ್ರ ರಕ್ಷಣಾ ಪಡೆಯು, ಕಾನೂನು ಕ್ರಮಕ್ಕಾಗಿ ಅವರನ್ನು ಇಲ್ಲಿನ ಪೊಲೀಸ್ ಠಾಣೆಗೆ ಒಪ್ಪಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಮೀನುಗಾರಿಕೆಯಲ್ಲಿ ತೊಡಗದಂತೆ ಭಾರತೀಯ ಮೀನುಗಾರರಿಗೆ ಪದೇ ಪದೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರು ಆಗಾಗ್ಗೆ ನಿಷೇಧಿತ ವಲಯ ಪ್ರವೇಶಿಸಿ, ಮತ್ಸ್ಯ ಸಂಪನ್ಮೂಲವನ್ನು ದೋಚುತ್ತಿದ್ದರು ಎಂದು ಸಮುದ್ರ ರಕ್ಷಣಾ ಏಜೆನ್ಸಿ ಅಧಿಕಾರಿ ಮಹಮದ್ ತಾರೀಖ್ ತಿಳಿಸಿದ್ದಾರೆ.

ಕಳೆದ ತಿಂಗಳು ಭಾರತೀಯ ಮೀನುಗಾರರ ಬಂಧನದ ನಾಲ್ಕು ಪ್ರಕರಣಗಳು ಸಂಭವಿಸಿದ್ದವು. ಒಟ್ಟು 26 ಮಂದಿಯನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಅಕ್ರಮ ಮೀನುಗಾರಿಕೆ ಆರೋಪದಲ್ಲಿ ಎರಡೂ ರಾಷ್ಟ್ರಗಳಲ್ಲಿ ನೂರಾರು ಮೀನುಗಾರರು ಪ್ರತಿವರ್ಷ ಬಂಧನಕ್ಕೀಡಾಗುತ್ತಿದ್ದಾರೆ.
ಮತ್ತಷ್ಟು
ವಾಷಿಂಗ್ಟನ್ ಕಾಕಸ್: ಒಬಾಮಾ ಗೆಲುವು
ವಲಸೆ ನೀತಿ ಕಠಿಣವಲ್ಲ, ಸರಳ: ಬ್ರಿಟನ್ ಸ್ಪಷ್ಟನೆ
ಸಮಯ ಪೋಲಾಗುತ್ತಿದೆ: ನಿಕೋಲಸ್ ಬರ್ನ್ಸ್
ಸಹಪಾಠಿಗಳನ್ನು ಕೊಂದು ತಾನೂ ಸತ್ತಳು
ಪ್ರಚಾರದ ವೇಳೆ ತಪ್ಪಾಗಿದೆ ಎಂದ ಬಿಲ್ ಕ್ಲಿಂಟನ್
ಲಂಕಾ: ಮಿಲಿಟರಿ ಕಾರ್ಯಾಚರಣೆ 49 ಸಾವು