ಇರಾಕ್‌ನ ಉತ್ತರದ ಬಲಾದ್ ಪಟ್ಟಣದಲ್ಲಿ ಭಾನುವಾರ ತೀವ್ರವಾದ ಕಾರ್ ಬಾಂಬೊಂದು ಸ್ಫೋಟಗೊಂಡು 33 ಮಂದಿ ಸಾವನಪ್ಪಿದ್ದಾರೆ ಎಂದು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಇರಾಕ್‌ನಲ್ಲಿನ ಭದ್ರತಾ ಲಾಭ ಮತ್ತು ಸೇನಾ ಮಟ್ಟವನ್ನು ಚರ್ಚಿಸಲು, ಅಮೆರಿಕ ಭದ್ರತಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಬಾಗ್ದಾದ್‌ಗೆ ಆಗಮಿಸುವ ಕೆಲವೇ ತಾಸುಗಳ ಮುನ್ನ ಈ ಸ್ಫೋಟ ಸಂಭಸಿತ್ತು.
ಬಲಾದ್ ಪಟ್ಟಣದ ಹತ್ತಿರದ ಜನಭರಿತ ಮಾರುಕಟ್ಟೆ ಹೊರಗಿನ ಚೆಕ್‌ಪಾಯಿಂಟ್‌ನಲ್ಲಿ ಈ ಸ್ಫೋಟ ಸಂಭವಿಸಿರುತ್ತದೆ ಎಂದು ಇರಾಕ್ ಭದ್ರತಾ ಪಡೆಯ ವಕ್ತಾರ ಕೊಲೊನೆಲ್ ಹಮಾದಿ ಅತ್ಶಾನ್ ತಿಳಿಸಿದ್ದಾರೆ.
ಅಲ್-ಖೈದ ವಿರುದ್ಧದ ಹೋರಾಟದಲ್ಲಿ ಅಮೆರಿಕ ಪಡೆಯ ಜತೆ ಕೈಜೋಡಿಸಿದ ಸುನ್ನೀ ಅರಬ್ ಸ್ವಯಂ ಸೇವಕರಿಂದ ಈ ಚೆಕ್‌ಪೋಸ್ಟ್‌ನ್ನು ನಡೆಸಲಾಗುತ್ತಿತ್ತು ಎಂದು ಹೇಳಿದ ಅತ್ಶಾನ್, ಈ ಭೀಕರ ಸ್ಫೋಟದಲ್ಲಿ ಸತ್ತವರಲ್ಲಿ ಮಕ್ಕಳು ಮಹಿಳೆಯರೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಬಾಗ್ದಾದ್ ಆಗಮಿಸಲಿರುವ ಗೇಟ್ಸ್, ತಾನು ಇರಾಕ್‌ನಲ್ಲಿನ ಅಮೆರಿಕ ಮಿಲಿಟರಿ ಕಮಾಂಡರ್ ಜನರಲ್ ಡೇವಿಡ್ ಪೆಟ್ರೋಸ್ ಜತೆ ಸೇನಾ ಮಟ್ಟದ ಕುರಿತು ಚರ್ಚಿಸಲಿದ್ದೇನೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.
|