ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸತ್ ವಿಸರ್ಜನೆ: ಬದಾವಿ ಮೌನ
ಮಲೇಷ್ಯಾದಲ್ಲಿ ಮುಂದೆ ನಡೆಯಬೇಕಾಗಿರುವ ಸಾರ್ವತ್ರಿಕ ಚುನಾವಣೆಗಾಗಿ ಸಂಸತ್ತನ್ನು ಫೆ.13 ರಂದು ವಿಸರ್ಜಿಸಬೇಕಾಗಿದ್ದು,ಈ ವಿಚಾರವನ್ನು ದೃಢಪಡಿಸಲು ಕುರಿತು ಮಲೇಷ್ಯಾ ಪ್ರಧಾನಿ ಅಬ್ದುಲ್ಹಾ ಅಹಮದ್ ಬದಾವಿ ಮೌನವಹಿಸಿದ್ದಾರೆ.

ಸಂಸತ್ ವಿಸರ್ಜನೆಯ ನಿರ್ಧಾರವನ್ನು ನಾನು ಮಾಡಿದ ಕೂಡಲೇ ಮಾಧ್ಯಮ ಗೋಷ್ಠಿಯನ್ನು ಕರೆದು ತಿಳಿಸುತ್ತೇನೆ. ಅಲ್ಲಿವರೆಗೆ ಸಾವಾಧಾನದಿಂದ ಕಾಯಿರಿ ಎಂದು ವರದಿಗಾರರ ಪ್ರಶ್ನೆಗೆ ಉತ್ತರ ನೀಡಿದರು.

ಸಂಸತ್ ವಿಸರ್ಜನೆ ಬಗ್ಗೆ ನಿರ್ಧಾರದ ಘೋಷಣೆಯನ್ನು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ ಅಬ್ದುಲ್ಲಾ, ಒಂದು ವೇಳೆ ನೀವು ಫೆಬ್ರವರಿ 13ಕ್ಕೆ ಸಂಬಂಧಿಸಿ ಎನಾದರೂ ಕಲ್ಪಿಸಿದ್ದರೆ ಹಾಗೆಯೇ ಮಾಡಿ ಅದು ನಿಮಗೆ ಬಿಟ್ಟ ವಿಷಯ ಎಂದು ಹೇಳಿದರು.

ಮುಂದಿನ ಸಾವ್ರತ್ರಿಕ ಚುನಾವಣೆಗಾಗಿನ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡಿದ ಬದಾವಿ, ಅದಕ್ಕೆ ಚುನಾಯಿತ ಪ್ರತಿನಿಧಿಗಳ ಬ್ಯಾರಿಸನ್ ನ್ಯಾಷನಲ್ (ಬಿಎನ್)ನ ಸೇವಾ ದಾಖಲೆಗಳು ಆಧಾರವಾಗಿರುವುದು ಎಂದು ತಿಳಿಸಿದರು.

ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ನಿರ್ಧರಿಸುವ ಮುನ್ನ ತಾನು ಅವರ ನಿರ್ವಹಣಾ ವರದಿ ಕಾರ್ಡುಗಳನ್ನು ಪಡೆಯಲಿದ್ದೇನೆ ಮತ್ತು ಅದನ್ನು ಅಧ್ಯಯನ ಮಾಡಲಿದ್ದೇನೆ ಎಂದು ಪ್ರಧಾನಿ ತಿಳಿಸಿದರು.
ಮತ್ತಷ್ಟು
ಇರಾಕ್ ಬಾಂಬ್: 33 ಸಾವು
ಪಾಕಿನಲ್ಲಿ 11 ಭಾರತೀಯ ಮೀನುಗಾರರ ಸೆರೆ
ವಾಷಿಂಗ್ಟನ್ ಕಾಕಸ್: ಒಬಾಮಾ ಗೆಲುವು
ವಲಸೆ ನೀತಿ ಕಠಿಣವಲ್ಲ, ಸರಳ: ಬ್ರಿಟನ್ ಸ್ಪಷ್ಟನೆ
ಸಮಯ ಪೋಲಾಗುತ್ತಿದೆ: ನಿಕೋಲಸ್ ಬರ್ನ್ಸ್
ಸಹಪಾಠಿಗಳನ್ನು ಕೊಂದು ತಾನೂ ಸತ್ತಳು