ತನ್ನ ಹಂತಕರ ಹೆಸರು ಮತ್ತು ಸೆಲ್ ಫೋನ್ ನಂಬರ್ ತನಗೆ ಅರಿವಿತ್ತು ಎಂಬ ವಿಷಯವನ್ನು ಪಿಪಿಪಿ ಪಕ್ಷದ ನಾಯಕಿ ಬೆನಜೀರ್ ಭುಟ್ಟೋ ಸಾವಿನ ಮೊದಲು ಮುಕ್ತಾಯಗೊಳಿಸಿದ್ದ ಪುಸ್ತಕದಲ್ಲಿ ಬರೆದಿದ್ದಾರೆ.
ತಮ್ಮ ಪುಸ್ತಕ 'ಮರಸ್ಯ: ಇಸ್ಲಾಮ್, ಪ್ರಜಾಪ್ರಭುತ್ವ ಮತ್ತು ಪಾಶ್ಚಿಮಾತ್ಯ' ದಲ್ಲಿ, ತನ್ನನ್ನು ಕೊಲ್ಲಲು ಬೈತುಲ್ಹಾ ಮೆಹ್ಸೂದ್, ಲಾಡೆನ್‌ನ ಪುತ್ರ ಹಮ್ಸ ಮತ್ತು ಎರಡು ಉಗ್ರ ಸಂಘಟನೆಯಿಂದ ನಾಲ್ಕು ಆತ್ಮಹತ್ಯಾ ಬಾಂಬರ್‌ಗಳನ್ನು ಕಳುಹಿಸಲಾಗಿದೆ ಎಂದು ಪಾಕ್ ಅಧಿಕಾರಿಗಳು ತನಗೆ ತಿಳಿಸಿದ್ದರು ಎಂದು ವಿವರಿಸಿದ್ದಾರೆ.
ಸಹಾನುಭೂತಿ ಹೊಂದಿರುವ ವಿದೇಶಿ ಮುಸ್ಲಿಂ ಸರಕಾರವೊಂದರಿಂದ ತಾನು ನಿಯೋಜಿತ ಹಂತಕರ ಹೆಸರು ಮತ್ತು ಸೆಲ್ ಸಂಖ್ಯೆಯನ್ನು ಪಡೆದಿದ್ದೆ ಎಂದು ಭುಟ್ಟೋ ಹೇಳಿದ್ದರು. ಅಕ್ಟೋಬರ್‌ನಲ್ಲಿ ತವರು ನೆಲಕ್ಕೆ ವಾಪಸಾಗುವ ಮುನ್ನ ತಾನು ಪಾಕ್ ಗುಪ್ತಚರ ಸೇವೆಯಲ್ಲಿ ತನ್ನ ಹತ್ಯೆಗೆ ಪ್ರಯತ್ನಿಸುತ್ತಿರುವ ಕೆಲವು ಜನರ ಬಗ್ಗೆ ಮುಷರಫ್‌ಗೆ ಪತ್ರ ಬರೆದಿದ್ದೆ ಎಂದು 54 ವರ್ಷದ ಭುಟ್ಟೋ ತಿಳಿಸಿದ್ದಾರೆ.
ಮಂಗಳವಾರದಂದು ಬಿಡುಗಡೆಯಾಗಲಿರುವ ಈ 318 ಪುಟಗಳ ಪುಸ್ತಕದಲ್ಲಿ ಭುಟ್ಟೋ, ಒಂದು ವೇಳೆ ತಾನು ಉಗ್ರರಿಂದ ಸತ್ತರೆ, ಅದಕ್ಕೆ ಸರಕಾರದಲ್ಲಿನ ಉಗ್ರರ ಪರ ಸಹಾನುಭೂತಿ ಹೊಂದಿರುವವರು ಕಾರಣ ಎಂದು ತಾನು ಮುಷರಫ್‌ರಲ್ಲಿ ಹೇಳಿದ್ದೆ ಎಂದು ಬರೆದಿದ್ದಾರೆ.
|