ರಾಷ್ಟ್ರದಲ್ಲಿ ಆರ್ಥಿಕ ಅಸ್ಥಿರತೆಯನ್ನು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್, ಜನತೆ ಮತ್ತು ವಾಣಿಜ್ಯೋದ್ಯಮಿಗಳಿಗೆ ಸಹಾಯ ಹಸ್ತ ನೀಡಲು ಮುಂದಾಗುವಂತೆ ಕಾಂಗ್ರೆಸ್‌ನಲ್ಲಿ ಕರೆ ನೀಡಿದ್ದಾರೆ.
ತನ್ನ ವಾರ್ಷಿಕ ಆರ್ಥಿಕ ವರದಿಯ ಕ್ಷಿಪ್ರ ಪರಿಚಯದ ವೇಳೆ, ಕಳೆದ ವಾರ ಕಾಂಗ್ರೆಸ್‌ನಲ್ಲಿ ಪಾಸು ಮಾಡಲಾಗಿರುವ 168 ಶತಕೋಟಿ ಡಾಲರ್‌ನ ಆರ್ಥಿಕ ಪರಿಹಾರ ಪ್ಯಾಕೇಜ್ ನಮ್ಮ ಆರ್ಥಿಕತೆಯ ವೃದ್ಧಿ ಮತ್ತು ನಮ್ಮ ಜನತೆ ಕೆಲಸ ಮುಂದುವರಿಸುತ್ತಿರುವಂತೆ ಮಾಡಲಿದೆ ಎಂದು ನುಡಿದರು.
ಹೆಚ್ಚಿನ ತೆರಿಗೆ ಪಾವತಿದಾರರಿಗೆ 600-1,200 ಡಾಲರ್‌ಗಳಷ್ಟು ರಿಯಾಯಿತಿ ಮತ್ತು, ಅಶಕ್ತರು, ಹಿರಿಯರು ಮತ್ತು ಇತರ ಕಡಿಮೆ ಆದಾಯವಿರುವವರಿಗಾಗಿ 300 ಡಾಲರ್‌ಗಳ ಚೆಕ್‌ಗಳನ್ನೊಳಗೊಂಡ ಉತ್ತೇಜಕ ಪ್ಯಾಕೇಜ್‌ಗೆ ಬುಶ್ ಈ ವಾರಾಂತ್ಯದಲ್ಲಿ ಸಹಿಮಾಡಲಿದ್ದಾರೆಂದು ನಿರೀಕ್ಷಿಸಲಾಗಿದೆ.
|