ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಗಡಿಪಾರು ಪ್ರಕರಣದ ವಿಚಾರಣೆಯನ್ನು ಅಲ್ಲಿನ ಸುಪ್ರೀಂ ಕೋರ್ಟ್ ಒಂದುವಾರಗಳ ಕಾಲ ಮುಂದೂಡಿದೆ.
ಶೇಕ್ ಹಸಿನಾ ಗಡಿಪಾರು ಕಾನೂನು ಬಾಹಿರ ಎಂಬುದಾಗಿ ಹೈಕೋರ್ಟ್ ಒಂದು ನೀಡಿರುವ ತೀರ್ಪಿನ ವಿರುದ್ಧ ಸರಕಾರ ತಡೆಯಾಜ್ಞೆ ಕೋರಿ ಮನವಿ ಸಲ್ಲಿಸಿತ್ತು.
ಮುಖ್ಯ ನ್ಯಾಯಾಧೀಶ ಎಂ.ರುಹುಲ್ ಅಮಿನ್ ನೇತೃತ್ವದ ಏಳು ಸದಸ್ಯರ ಮೇಲ್ಮನವಿ ವಿಭಾಗವು ಫೆ.19ರೊಳಗಾಗಿ ಕ್ರಮಬದ್ಧ ರಜಾ ದೂರು ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದೆ.
|