ಪಾಕಿಸ್ತಾನದ ಮುಂಬರುವ ಚುನಾವಣೆಯಲ್ಲಿ ಬಹುದೊಡ್ಡ ಗುಂಪುಗಾಳಾಗಿ ಹೊರಹೊಮ್ಮಿದಲ್ಲಿ, ಮೈತ್ರಿ ಸರಕಾರವನ್ನು ರಚಿಸುವುದಾಗಿ ಪಾಕಿಸ್ತಾನದ ಎರಡು ಪ್ರಮುಖ ಪಕ್ಷಗಳಾಗಿರುವ ಪಿಪಿಪಿ ಮತ್ತು ಪಿಎಂಎಲ್-ಎನ್ ಪಕ್ಷಗಳು ಹೇಳಿವೆ. ರಾಷ್ಟ್ರದಲ್ಲಿ ಚುನಾಯಿತ ಪ್ರತಿನಿಧಿಗಳಿಂದ ಸೇನೆಯು ಅಧಿಕಾರವನ್ನು ಕಿತ್ತುಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವು ತಿಳಿಸಿವೆ.
ಅಧಿಕಾರದಲ್ಲಿ ಪಾಲು ಕೇಳದೆಯೇ ಪಿಪಿಪಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಪಿಎಂಎಲ್-ಎನ್ ಮುಖ್ಯಸ್ಥ ಮಾಜಿ ಪ್ರಧಾನಿ ನವಾಜ್ ಶರೀಫ್ ಪಿಪಿಪಿಯ ಸಹಾಧ್ಯಕ್ಷ ಅಸಿಫ್ ಆಲಿ ಜರ್ದಾರಿಯವರಿಗೆ ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿಯ ಸುಮಾರು ಒಂದು ಗಂಟೆಯ ಕಾಲದ ಸಭೆಯಲ್ಲಿ ಶರೀಫ್ ಈ ಭರವಸೆ ನೀಡಿದ್ದಾರೆ.
ಶರೀಫ್ ಅವರೊಂದಿಗೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಜರ್ದಾರಿ, ಪಿಎಂಎನ್‌ಎಲ್ ಹಾಗೂ ಇತರೆ ಪ್ರಜಾಪ್ರಭುತ್ವ ಶಕ್ತಿಗಳನ್ನು ತಮ್ಮಂದಿಗೆ ಸೇರಿಕೊಳ್ಳುವಂತೆ, ಪಿಪಿಪಿಯು ಬಹುಮತ ಪಡೆದರೂ ಸ್ವಾಗತಿಸಲಿದೆ ಎಂದು ನುಡಿದರು.
ರಾಷ್ಟ್ರವು ಅಪಾಯಕಾರಿ ಹಂತವನ್ನು ದಾಟುತ್ತಿರುವ ಕಾರಣ ತಾವೆಲ್ಲ ಒಂದಾಗಲಿದ್ದೇವೆ, ಮತ್ತು ಒಟ್ಟಾಗಿ ರಾಷ್ಟ್ರವನ್ನು ಈ ಬಿಕ್ಕಟ್ಟಿನಿಂದ ಹೊರತರಲಿದ್ದೇವೆ ಎಂದು ನುಡಿದರು.
|