ಸೇನಾ ವಾಹನದ ಮೇಲೆ ದುಷ್ಕರ್ಮಿಗಳು ನಡೆಸಿರುವ ಬಾಂಬ್ ದಾಳಿಯಿಂದಾಗಿ ಮೇಜರ್ ಸೇರಿದಂತೆ ಮೂವರು ಸೈನಿಕರು ಹತರಾಗಿರುವ ಘಟನೆ ಪಾಕಿಸ್ತಾನದಲ್ಲಿ ಸಂಭವಿಸಿದೆ.
ಬಜೌರ್ ಬುಡಕಟ್ಟು ಪ್ರದೇಶದಲ್ಲಿ ಬಜೌರ್ ಸ್ಕೌಟ್ಸ್ ಮೇಲೆ ರಸ್ತೆಬದಿಯಲ್ಲಿ ಬಾಂಬ್ ಇರಿಸುವ ಮೂಲಕ ದಾಳಿ ನಡೆಸಲಾಗಿತ್ತು. ಬಜೌರ್ ಅಫ್ಘಾನಿಸ್ತಾನದ ಗಡಿ ಪ್ರದೇಶದ ಬಳಿಯಲ್ಲಿದೆ. ತಮ್ಮ ರಾತ್ರಿ ಪಾಳಿ ಮುಗಿಸಿ ಸೈನಿಕರು ಹಿಂತಿರುಗುತ್ತಿದ್ದ ವೇಳೆ ಈ ದಾಳಿ ನಡೆಸಲಾಗಿದೆ.
ಫೆ.18ರ ಚುನಾವಣೆಯ ಹಿನ್ನೆಲೆಯಲ್ಲಿ ಸಾವಿರಾರು ಪೊಲೀಸರು ಹಾಗೂ ಅರೆ ಸೇನಾಪಡೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದರೂ ಈ ದುರಂತ ಸಂಭವಿಸಿದೆ. ಈ ದಾಳಿಯ ಜವಾಬ್ದಾರಿ ವಹಿಸಿಕೊಳ್ಳಲು ಯಾವುದೇ ಸಂಘಟನೆ ಮುಂದೆ ಬಂದಿಲ್ಲ.
|