ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯೂ ಮೆಕ್ಸಿಕೋ ಗೆದ್ದ ಹಿಲರಿ ಕ್ಲಿಂಟನ್
ಅಮೆರಿಕ ಸೆನೆಟರ್, ಅಧ್ಯಕ್ಷೀಯ ಅಭ್ಯರ್ಥಿತನದ ಆಕಾಂಕ್ಷಿ ಹಿಲರಿ ಕ್ಲಿಂಟನ್, ಫೆಬ್ರವರಿಯಲ್ಲಿ ನಡೆದ ನ್ಯೂ ಮೆಕ್ಸಿಕೋ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪ್ರತಿಸ್ಫರ್ಧಿ ಬಾರಕ್ ಒಬಾಮರನ್ನು ಸೋಲಿಸಿದ್ದಾರೆ. ಈ ಚುನಾವಣೆಯ ಮತ ಎಣಿಕೆಗೆ ಒಂಬತ್ತು ದಿಗಗಳು ತಗುಲಿದ್ದವು ಎಂಬುದಾಗಿ ಪಕ್ಷ ಚುನಾವಣಾ ಅಧಿಕಾರಿ ಗುರುವಾರ ಹೇಳಿದ್ದಾರೆ.

ನ್ಯೂಯಾರ್ಕ್ ಸೆನೆಟರ್ ಹಾಗೂ ಮಾಜಿ ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್ ಬಾರಕ್ ಒಬಾಮರನ್ನು 1,709 ಮತಗಳಿಂದ ಸೋಲಿಸಿದ್ದಾರೆ. ಕ್ಲಿಂಟನ್ 73,105 ಮತಗಳನ್ನು ಗಳಿಸಿದ್ದರೆ, ಒಬಾಮ 71,396 ಮತಗಳನ್ನು ಗಳಿಸಿದ್ದಾರೆ ಎಂದು ನ್ಯೂ ಮೆಕ್ಸಿಕೋ ಡೆಮಾಕ್ರೆಟಿಕ್ ಪಕ್ಷದ ಚುನಾವಣಾ ಅಧಿಕಾರಿ ಬ್ರಾಡ್ ಕೋಲನ್ ಹೇಳಿದ್ದಾರೆ.

ನ್ಯೂಮೆಕ್ಸಿಕನ್ನರ ಬೆಂಬಲ ಪಡೆದಿರುವುದು ತನಗೆ ಹೆಮ್ಮೆ ಎನಿಸುತ್ತದೆ ಎಂಬುದಾಗಿ ಕ್ಲಿಂಟನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಈ ಮೂಲಕ ಅವರು 26 ಪ್ರತಿನಿಧಿ ಸ್ಥಾನಗಳಲ್ಲಿ 14ನ್ನು ಗೆದ್ದುಕೊಂಡಂತಾಗಿದೆ.

ನ್ಯೂ ಮೆಕ್ಸಿಕೋದಲ್ಲಿ 'ಸೂಪರ್ ಟ್ಯೂಸ್‌ಡೇ'ಯಂದು ಚುನಾವಣೆ ನಡೆದಿತ್ತು. ಆ ದಿನದಂದು ಅಮೆರಿಕದ ಆರ್ಧದಷ್ಟು ರಾಜ್ಯಗಳು ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕನ್ ಅಭ್ಯರ್ಥಿಗಳ ಆಯ್ಕೆ ಮಾಡಿದ್ದರು.

ಇದು ಅತ್ಯಂತ ಸಂಕುಚಿತ ಗೆಲುವಾಗಿದ್ದರೂ, ಕ್ಲಿಂಟನ್‌ಗೆ ಸ್ವಾಗತಾರ್ಹ ಹಾಗೂ ಪ್ರಮುಖ ಗೆಲುವಾಗಿದೆ. ಫೆ.5ರ ಬಳಿಕ ಅವರು ಸತತ ಎಂಟು ಚುನಾವಣೆಗಳಲ್ಲಿ ಸೋಲನ್ನಪ್ಪಿದ್ದರು.
ಮತ್ತಷ್ಟು
ಲಾಡೆನ್ 'ಆದರ್ಶ ಗುರು' ಸ್ಪೋಟಕ್ಕೆ ಆಹುತಿ
ಪಾಕ್: ಬಾಂಬ್ ದಾಳಿಗೆ 3 ಸೈನಿಕರು ಬಲಿ
ಪಾಕಿಸ್ತಾನಿಗರಿಗೆ ಮುಶರಫ್ ಬೇಡವಂತೆ!
ಡೆನ್ಮಾರ್ಕ್ ಪತ್ರಿಕೆಗಳಲ್ಲಿ ಪ್ರವಾದಿ ವ್ಯಂಗ್ಯಚಿತ್ರ ಮರುಪ್ರಕಟ
ಪಾಕ್: ಪಿಪಿಪಿ, ಪಿಎಂಎಲ್-ಎನ್ ಮೈತ್ರಿಗೆ ಸಿದ್ಧತೆ
ಅಮೆರಿಕ: ಒಬಾಮ, ಮೆಕ್‌ಕೆಯ್ನ್ ಮುನ್ನಡೆ