ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶನಿಯ ಚಂದ್ರನಲ್ಲಿ ಅಗಾಧ ತೈಲ ನಿಕ್ಷೇಪ!
ಶನಿಗ್ರಹದ ಅತ್ಯಂತ ದೊಡ್ಡ ಚಂದ್ರ ಮತ್ತು ಸೌರವ್ಯೂಹದ ದ್ವಿತೀಯ ಅತ್ಯಂತ ದೊಡ್ಡ ಚಂದ್ರ ಟೈಟಾನ್‌ನಲ್ಲಿ ದ್ರವ್ಯ ಹೈಡ್ರೋಕಾರ್ಬನ್‌ಗಳ ಕೊಳಗಳು ಇದ್ದು, ಇವು ಭೂಮಿ ಮೇಲಿರುವ ನೈಸರ್ಗಿಕ ಅನಿಲ ನಿಕ್ಷೇಪಗಳಿಗಿಂತ ನೂರುಪಾಲು ಹೆಚ್ಚು ಇದೆಯಂತೆ!

ಅದಾಗ್ಯೂ, ಇದು ಭೂಮಿಯಿಂದ 1.3 ಶತಕೋಟಿ ಕಿಲೋಮೀಟರ್‌ಗಳ ಆಚೆ ಮೈನಸ್ 179 ಡಿಗ್ರಿಗಳ ತಾಪಮಾನವಿರುವ ಕಡೆ ಇದೆ.

ಚಂದ್ರನ ಮೇಲ್ಮೈಯಲ್ಲಿ ಮಿಥೇನ್ ಹಾಗೂ ಈಥೇನ್ ಮಳೆ ರೂಪದ ದ್ರವ ಹೈಡ್ರೋಕಾರ್ಬನ್‌ಗಳು ಬೃಹತ್ತಾದ ಕೊಳಗಳು ಮತ್ತು 'ತೋಲಿನ್ಸ್' ಎಂದು ಕರೆಯುವ ಸಂಕೀರ್ಣವಾದ ಜೈವಿಕ ಕಣಗಳು ತೈಲ ನಿಕ್ಷೇಪಕ್ಕೆ ಕಾರಣ ಎಂದು ಯುರೋಪ್ ಬಾಹ್ಯಾಕಾಶ ಏಜೆನ್ಸಿ(ಇಎಸ್ಎ)ಯ ಸಂಶೋಧಕರು ಹೇಳಿದ್ದಾರೆ.

ಟೈಟಾನ್‌ನಲ್ಲಿರುವ ದ್ರವ್ಯವು ಮೀಥೇನ್ ಆಗಿದ್ದು, ಇದು ಕೆಲವು ಮಿಲಿಯ ವರ್ಷಗಳ ಕಾಲ ಮಾತ್ರವಿದ್ದು ಬಳಿಕ ಆಕಾಶದಲ್ಲಿ ಮರೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಮತ್ತಷ್ಟು
ಅಮೆರಿಕ: ಮತ್ತೊಂದು ಕ್ಯಾಂಪಸ್ ಶೂಟೌಟ್, 6 ಬಲಿ
ನ್ಯೂ ಮೆಕ್ಸಿಕೋ ಗೆದ್ದ ಹಿಲರಿ ಕ್ಲಿಂಟನ್
ಲಾಡೆನ್ 'ಆದರ್ಶ ಗುರು' ಸ್ಪೋಟಕ್ಕೆ ಆಹುತಿ
ಪಾಕ್: ಬಾಂಬ್ ದಾಳಿಗೆ 3 ಸೈನಿಕರು ಬಲಿ
ಪಾಕಿಸ್ತಾನಿಗರಿಗೆ ಮುಶರಫ್ ಬೇಡವಂತೆ!
ಡೆನ್ಮಾರ್ಕ್ ಪತ್ರಿಕೆಗಳಲ್ಲಿ ಪ್ರವಾದಿ ವ್ಯಂಗ್ಯಚಿತ್ರ ಮರುಪ್ರಕಟ