ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಗರೇಟು ಸೇದಬೇಕಿದ್ದರೆ ಪರ್ಮಿಟ್ ತೋರಿಸಿ!
ಬ್ರಿಟನ್‌ನಲ್ಲಿ ಧಂ ಎಳೆಯಬೇಕೇ? ಅದಕ್ಕಾಗಿ ಪರವಾನಗಿ ಪಡೆಯುವುದು ಅಗತ್ಯ!

ಅಚ್ಚರಿಯೇ? ನೀವು ನಂಬಲೇಬೇಕು. ಬ್ರಿಟನ್‌ನಲ್ಲಿ ಸಿಗರೇಟು ಖರೀದಿ ಮಾಡಬೇಕಿದ್ದರೆ ಇನ್ನು ಮುಂದೆ 10 ಪೌಂಡ್ ಮೌಲ್ಯದ ಪರವಾನಗಿ ಪತ್ರ ತೋರಿಸಬೇಕಾಗುತ್ತದೆ. ಇಂಥದ್ದೊಂದು ಶಿಫಾರಸನ್ನು ಮುಂದಿಟ್ಟಿರುವುದು ಸರಕಾರದ ಆರೋಗ್ಯ ಸಲಹಾ ಸಂಸ್ಥೆಯಾಗಿರುವ 'ಹೆಲ್ತ್ ಇಂಗ್ಲೆಂಡ್'.

ಧೂಮಪಾನ ತ್ಯಜಿಸುವವರ ಸಂಖ್ಯೆಯನ್ನು ಇದು ಖಂಡಿತವಾಗಿಯೂ ಏರಿಸುತ್ತದೆ ಎಂದು ಸಲಹಾ ಮಂಡಳಿ ಅಧ್ಯಕ್ಷ ಜೂಲಿಯನ್ ಲೀ ಗ್ರಾಂಡ್ ಅವರು ಬಿಬಿಸಿ ರೇಡಿಯೋಗೆ ತಿಳಿಸಿದ್ದಾರೆ.

ಈ ಪ್ರಸ್ತಾಪಿತ ಯೋಜನೆಯಿಂದ ಸಂಗ್ರಹವಾಗುವ ಹಣ ರಾಷ್ಟ್ರೀಯ ಆರೋಗ್ಯ ಯೋಜನೆಗೆ ಸೇರುತ್ತದೆ ಎಂದು ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರ ಸಲಹೆಗಾರರೂ ಆಗಿದ್ದ ಲೀ ಗ್ರಾಂಡ್ ಹೇಳಿದ್ದಾರೆ.

ಆದರೆ, ಧೂಮಪಾನ ಸವಿಯುವ ಹಕ್ಕಿಗಾಗಿರುವ ಸ್ವಾತಂತ್ರ್ಯ ಸಂಘಟನೆ (ಫಾರೆಸ್ಟ್) ಎಂಬ ಧೂಮಪಾನಿಗಳ ಹಕ್ಕಿಗೆ ಹೋರಾಡುತ್ತಿರುವ ಸಂಘಟನೆಯು ಈ ಹೆಜ್ಜೆಯನ್ನು 'ದಮನಕಾರಿ ಕ್ರಮ' ಎಂದು ಬಣ್ಣಿಸಿದೆ. ಈಗಾಗಲೇ ಧೂಮಪಾನಕ್ಕಾಗಿ ಅತ್ಯಧಿಕ ಹಣ ತೆರುತ್ತಿರುವ ಧೂಮಪಾನಿಗಳಿಗೆ ಇದು ಮತ್ತಷ್ಟು ಹೊಡೆತ ನೀಡುವ ಯತ್ನ ಎಂದು ಅದು ತಿಳಿಸಿದೆ.

ಪರವಾನಗಿ ಪಡೆಯಲು ಇರುವ ಅಸೌಕರ್ಯದಿಂದಾಗಿ ಹಾಗೂ ಅದರ ದರದಿಂದಾಗಿ ಜನರು ಧೂಮಪಾನದ ಸಹವಾಸ ಬೇಡ ಎಂದು ದೂರ ಹೋಗುವ ಸಾಧ್ಯತೆ ಹೆಚ್ಚು ಎಂಬುದು ಲೀ ಗ್ರಾಂಡ್ ವಿಶ್ವಾಸ.

ಇದಕ್ಕಾಗಿ ಅತ್ಯಂತ ಸಂಕೀರ್ಣವಾದ ಫಾರ್ಮ್ ತುಂಬಬೇಕು, ಭಾವಚಿತ್ರ ಲಗತ್ತಿಸಬೇಕು... ಹೀಗೆಲ್ಲಾ ಒಂದಷ್ಟು ಸಮಸ್ಯೆಗಳಿವೆ. ಹೀಗಾಗಿ ಪ್ರತಿವರ್ಷವೂ ಧೂಮಪಾನಕ್ಕಾಗಿ ಪರವಾನಗಿ ಪಡೆಯುವ ಮುನ್ನ ನಿಮಗೆ ಯೋಚಿಸಲು ಅವಕಾಶ ನೀಡಿದಂತಾಗುತ್ತದೆ ಎನ್ನುತ್ತಾರವರು.

ಸುಮಾರು 70 ಶೇಕಡಾದಷ್ಟು ಧೂಮಪಾನಿಗಳು ಈ ಹೊಗೆಬತ್ತಿ ಸೇವನೆಯ ಚಾಳಿ ತ್ಯಜಿಸಲು ಬಯಸುತ್ತಾರೆ. ಧೂಮಪಾನ ಪುನರಾರಂಭಿಸಲು ಅಥವಾ ಪ್ರಾರಂಭಿಸಲು ನೀವು ಒಂದಷ್ಟು ಕಷ್ಟ ಒಡ್ಡಿದರೆ, ಇದು ಖಂಡಿತಾ ಕೆಲಸ ಮಾಡುತ್ತದೆ ಎಂದು ಲೀ ಗ್ರಾಂಡ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಶನಿಯ ಚಂದ್ರನಲ್ಲಿ ಅಗಾಧ ತೈಲ ನಿಕ್ಷೇಪ!
ಅಮೆರಿಕ: ಮತ್ತೊಂದು ಕ್ಯಾಂಪಸ್ ಶೂಟೌಟ್, 6 ಬಲಿ
ನ್ಯೂ ಮೆಕ್ಸಿಕೋ ಗೆದ್ದ ಹಿಲರಿ ಕ್ಲಿಂಟನ್
ಲಾಡೆನ್ 'ಆದರ್ಶ ಗುರು' ಸ್ಪೋಟಕ್ಕೆ ಆಹುತಿ
ಪಾಕ್: ಬಾಂಬ್ ದಾಳಿಗೆ 3 ಸೈನಿಕರು ಬಲಿ
ಪಾಕಿಸ್ತಾನಿಗರಿಗೆ ಮುಶರಫ್ ಬೇಡವಂತೆ!