ಪಾಕಿಸ್ತಾನದ ಚುನಾವಣೆಗೆ ಕೇವಲ ಎರಡು ದಿನಗಳು ಬಾಕಿಯುಳಿದಿರುವಂತೆ, ಮಾಜಿ ಪ್ರಧಾನಿ ನವಾಜ್ ಶರೀಫ್, ಅಧ್ಯಕ್ಷ ಮುಶರಫ್ ವಿರುದ್ಧ ಹಿಂದೆಂದಿಗಿಂತ ಅತ್ಯಂತ ಕಟು ಟೀಕೆ ಮಾಡಿದ್ದು ಮುಶರಫ್ ಮಾನಸಿಕ ಸಮತೋಲನ ಕಳಕೊಂಡಿದ್ದಾರೆ ಎಂದಿದ್ದಾರೆ.
ಖಾಸಗೀ ವಾಹಿನಿಯೊಂದರೊಂದಿಗೆ ಮಾತನಾಡುತ್ತಿದ್ದ ಶರೀಫ್, ಮುಶರಫ್ ತನ್ನ ಮಾನಸಿಕ ಹಾಗೂ ದೈಹಿಕ ಸಮತೋಲನ ಕಳಕೊಂಡಿದ್ದಾರೆ, ಅವರು ತನ್ನ ಕಚೇರಿ ತೊರೆಯುವುದೊಳಿತು ಎಂದು ಹೇಳಿದ್ದಾರೆ.
ಎಂಟು ವರ್ಷಗಳ ಗಡಿಪಾರಿನ ಬಳಿಕ, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಶರೀಫ್, ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ಇನ್ನೂ ಕಾಲ ಪಕ್ವವಾಗಿಲ್ಲ ಎಂದು ಅಭಿಪ್ರಾಯಿಸಿದರು.
ಬೆನಜೀರ್ ಭುಟ್ಟೋ ಹತ್ಯೆಯು ನವಾಜ್ ಸೇರಿದಂತೆ ಎಲ್ಲ ಪಾಕಿಗರ ಮನದಲ್ಲಿ ಇನ್ನೂ ಹಸಿಹಸಿಯಾಗಿದ್ದು, ಪ್ರತಿ ಸಮಾವೇಶವೂ ಜೀವನ್ಮರಣದ ಕುರಿತ ಜೂಜಾಟವಾಗಿದೆ.
|