ಡೆನ್ಮಾರ್ಕಿನ ಕೆಲವು ಪತ್ರಿಕೆಗಳು ಪ್ರವಾದಿ ಮಹಮ್ಮದ್ ಅವರ ವ್ಯಂಗ್ಯ ಚಿತ್ರವನ್ನು ಮರುಪ್ರಕಟಿಸಿರುವ ಕ್ರಮವನ್ನು ಖಂಡಿಸಿರುವ ಬಾಂಗ್ಲಾದೇಶ, ಇದು ಜಗತ್ತಿನಾದ್ಯಂತ ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದೆ.
ಈ ವ್ಯಂಗ್ಯಚಿತ್ರಗಳ ಮರು ಪ್ರಕಟಣೆ ಕುರಿತು ತೀವ್ರ ವಿಷಾದವಿದೆ ಎಂಬುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರರು ಹೇಳಿದ್ದಾರೆ.
ಶತಕೋಟಿ ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡುವ ವಿಚಾರವು ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ವೃದ್ಧಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ವಿಫಲವಾಗಿದ್ದೇವೆ ಎಂದು ಹೇಳಿರುವ ಅವರು ಪತ್ರಿಕೆಗಳ ಈ ಕ್ರಮ ಕ್ರೋಧವನ್ನು ಹೆಚ್ಚು ಮಾಡುವಂತೆ ಮಾತ್ರ ಮಾಡಬಲ್ಲುದು ಹಾಗೂ ಇದು ಅಸ್ಥಿರತೆಗೆ ಹಾದಿಯಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.
|