ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ: ಪಾಕ್‌ನಲ್ಲಿ ಹೆಚ್ಚಿದ ಭದ್ರತೆ
ಪಾಕಿಸ್ತಾನದ ಮಹಾಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲೆಡೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಸುಮಾರು 80 ಸಾವಿರ ಭದ್ರತಾ ಸಿಬ್ಬಂದಿಗಳನ್ನು ಪಾಕ್‌ನಾದ್ಯಂತ ನಿಯೋಜಿಸಲಾಗಿದೆ.

ಫೆಬ್ರವರಿ 18ರಂದು ಪಾಕಿಸ್ತಾನದಲ್ಲಿ ಐತಿಹಾಸಿಕ ಚುನಾವಣೆ ನಡೆಯಲಿದೆ. ಪಾಕಿಸ್ತಾನದ ವಾಣಿಜ್ಯ ಬೀಡಾಗಿರುವ ಕರಾಚಿಯಲ್ಲಿ ಫೆ.19ರ ತನಕ ಕಟ್ಟೆಚ್ಚರ ವಹಿಸಲಾಗಿದೆ.

ವಾಯುವ್ಯ ಪಾಕಿಸ್ತಾನದ ಕುರ್ರಂನ ಪರಾಚಿನಾರ್ ಎಂಬಲ್ಲಿನ ಪಿಪಿಪಿ ಕಚೇರಿ ಎದುರು ಶನಿವಾರ ಸಂಭವಿಸಿರುವ ಬಾಂಬ್ ದುರಂತದಲ್ಲಿ 37 ಮಂದಿ ಹತರಾಗಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ಶಾಂತಿ ಕಾಪಾಡುವಂತೆ ಪಿಪಿಪಿಯು ಜನತೆಯಲ್ಲಿ ಮನವಿ ಮಾಡಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪಾಕ್ ಚುನಾವಣೆಯ ಮೇಲೆ ಪರಿಣಾಮ ಬೀರುವ ನಿಚ್ಚಳ ಸಾಧ್ಯತೆಗಳು ಕಾಣುತ್ತಿವೆ. ತಮ್ಮ ನೆಚ್ಚಿನ ನಾಯಕಿಯ ಪಕ್ಷಕ್ಕೆ ಮತಚಲಾಯಿಸಲು ಅವರ ಬೆಂಬಲಿಗ ಮತದಾರರು ಉತ್ಸುಕರಾಗಿದ್ದಾರೆ.

"ವಿರೋಧ ಪಕ್ಷಗಳ ವಿರುದ್ಧ ಮಾತ್ರ ಆತ್ಮಾಹುತಿ ಬಾಂಬ್ ದಾಳಿಗಳು ನಡೆಯುತ್ತಿವೆ. ಸರಕಾರ ಆತ್ಮಾಹುತಿ ಬಾಂಬ್ ದಾಳಿ ಎದುರಿಸುತ್ತಿಲ್ಲ. ಮತದಾನಕ್ಕಿಂತ ಜೀವ ಅಮೂಲ್ಯವಾಗಿದ್ದರೂ, ನಾವು ಮತಚಲಾಯಿಸಲಿದ್ದೇವೆ" ಎಂಬುದಾಗಿ ಪಿಪಿಪಿ ಬೆಂಬಲಿಗರು ಹೇಳುತ್ತಿದ್ದಾರೆ.

ಯಾವ ಕ್ಷಣದಲ್ಲಿ ಎಲ್ಲಿ ಬಾಂಬ್ ಸಿಡಿಯುತ್ತದೆ ಎಂಬ ಆತಂಕದಲ್ಲಿ ಪಾಕಿಸ್ತಾನಿಯರು ದಿನದೂಡುತ್ತಿದ್ದು, ಇವರಲ್ಲಿ ಎಷ್ಟು ಮಂದಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು
ಪಾಕ್: ಪಿಪಿಪಿ ಕಚೇರಿ ಹೊರಗಡೆ ಸ್ಫೋಟ, 12 ಸಾವು
ಪ್ರವಾದಿ ವ್ಯಂಗ್ಯಚಿತ್ರ ಮರುಮುದ್ರಣಕ್ಕೆ ಬಾಂಗ್ಲಾ ಖಂಡನೆ
ಶೀಘ್ರ ಶರೀಫ್, ಜರ್ದಾರಿ ಮಾತುಕತೆ
ಮಾನಸಿಕ ಸಮತೋಲನವಿಲ್ಲದ ಮುಶರಫ್: ನವಾಜ್
ಸಿಗರೇಟು ಸೇದಬೇಕಿದ್ದರೆ ಪರ್ಮಿಟ್ ತೋರಿಸಿ!
ಶನಿಯ ಚಂದ್ರನಲ್ಲಿ ಅಗಾಧ ತೈಲ ನಿಕ್ಷೇಪ!