ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಚುನಾವಣೆಗೆ ರಕ್ತಸಿಕ್ತ ಆರಂಭ
ಪಿಎಂಎಲ್-ಎನ್ ಅಭ್ಯರ್ಥಿ‌ಗೆ ಗುಂಡಿಕ್ಕಿ ಹತ್ಯೆ
ಪಾಕಿಸ್ತಾನದ ಮಹಾಚುನಾವಣೆಯ ಮತದಾನ ಹಿಂಸಾಚಾರದೊಂದಿಗೆ ಆರಂಭಗೊಂಡಿದೆ. ಲಾಹೋರಿನ ಮತಗಟ್ಟೆ ಸ್ವಾತ್ ಕಣಿವೆ ಮತಗಟ್ಟೆಯಲ್ಲಿ ಪಿಎಂಎಲ್-ಎನ್ ಅಭ್ಯರ್ಥಿಯೊಬ್ಬನನ್ನು ಮತ ಚಲಾವಣೆಯ ಆರಂಭಕ್ಕಿಂತಲೂ ಮುಂಚಿತವಾಗಿ ಗುಂಡಿಟ್ಟು ಕೊಲ್ಲಲಾಗಿದೆ.

ಪಂಜಾಬ್ ಪ್ರಾಂತೀಯ ವಿಧಾನ ಸಭಾ ಚುನಾವಣೆಗೆ ಸ್ಫರ್ಧಿಸಿದ್ದ ಚೌಧುರಿ ಅಸಿಫ್ ಆಲಿಯವರನ್ನು ಅಪರಿಚಿತ ಬಂದೂಕುಧಾರಿ ಸೋಮವಾರ ನಸುಕಿನಲ್ಲಿ ಗುಂಡಿಟ್ಟು ಕೊಂದಿದ್ದಾನೆ. ಗುಂಡೇಟು ತಗುಲಿದ ಚೌಧುರಿಯವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಫಲಕಾರಿಯಾಗದೆ ಅವರು ಕೆಲವೇ ಕ್ಷಣಗಳಲ್ಲಿ ಅಸು ನೀಗಿದರು.

ಈ ದಾಳಿಯಲ್ಲಿ ಇತರ ಒಂಭತ್ತು ಪಿಎಂಎಲ್-ಎನ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಮತದಾರರು ಮತದಾನಕ್ಕೆ ತೆರಳಲಾರಂಭಿಸಿರುವಂತೆಯೇ, ಚೌಧುರಿ ಹತ್ಯೆಯು ಲಾಹೋರಿನಲ್ಲಿ ಉದ್ವಿಗ್ನತೆ ಮೂಡಿಸಿದೆ.

ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

ಮತದಾನ ಆರಂಭ
ಹಿಂಸಾಚಾರ ಪೀಡಿತ ರಾಷ್ಟ್ರದಲ್ಲಿ ಅತ್ಯಂತ ನಿರೀಕ್ಷಿತ ಮತದಾನವು ಸೋಮವಾರ ಮುಂಜಾನೆ ಆರಂಭಗೊಂಡಿದೆ. ಮತದಾರರು ಆರಂಭದ ಅವಧಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಮತಗಟ್ಟೆಯತ್ತ ತೆರಳುತ್ತಿದ್ದಾರೆ.

ಸ್ವಾತ್ ಕಣಿವೆ ಪ್ರದೇಶದಲ್ಲೇ ಇನ್ನೊಂದು ಹಿಂಸಾಚಾರ ಸಂಭವಿಸಿದ್ದು ಉಗ್ರಗಾಮಿಗಳು ಮತಗಟ್ಟೆಯನ್ನು ಸ್ಫೋಟಿಸಿದ್ದಾರೆ. ಈ ಘಟನೆಯ ಕುರಿತ ವಿವರಣೆಗಳು ಇನ್ನಷ್ಟೆ ಲಭಿಸಬೇಕಿದೆ.

ಹೈದರಾಬಾದ್‌ನ ಬದಿನ್ ಮತಗಟ್ಟೆಯಲ್ಲಿ, ಮತದಾನ ಆರಂಭವಾಗುತ್ತಿರುವಂತೆ, ಅಪರಿಚಿತ ಸಶಸ್ತ್ರಧಾರಿಗಳು ಮತಪತ್ರಗಳನ್ನು ಕಸಿದು ಪರಾರಿಯಾಗಿದ್ದಾರೆ.
ಮತ್ತಷ್ಟು
ಲಂಕಾ: ಪಾಕ್‌ನಿಂದ ಶಸ್ತ್ರಾಸ್ತ್ರ ಖರೀದಿ
ಚುನಾವಣೆ: ಪಾಕ್‌ನಲ್ಲಿ ಹೆಚ್ಚಿದ ಭದ್ರತೆ
ಪಾಕ್: ಪಿಪಿಪಿ ಕಚೇರಿ ಹೊರಗಡೆ ಸ್ಫೋಟ, 12 ಸಾವು
ಪ್ರವಾದಿ ವ್ಯಂಗ್ಯಚಿತ್ರ ಮರುಮುದ್ರಣಕ್ಕೆ ಬಾಂಗ್ಲಾ ಖಂಡನೆ
ಶೀಘ್ರ ಶರೀಫ್, ಜರ್ದಾರಿ ಮಾತುಕತೆ
ಮಾನಸಿಕ ಸಮತೋಲನವಿಲ್ಲದ ಮುಶರಫ್: ನವಾಜ್