ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಂ.1 ಬೇಕಿದ್ದರೆ ಕೇವಲ 52 ಕೋಟಿ ರೂ. ನೀಡಿ!
ನಂ.1 ಆಗಬೇಕಿದ್ದರೆ ಏನು ಮಾಡಬೇಕು? ಹಾಗೆ ಮಾಡಿ, ಹೀಗೆ ಮಾಡಿ ಅಂತ ಸಲಹೆ ಕೊಡೋರ ಸಂಖ್ಯೆಗೇನೂ ಕೊರತೆಯಿಲ್ಲ. ಆದರೆ ನಂ.1 ಕಾರು ಲೈಸೆನ್ಸ್ ಪ್ಲೇಟ್ ಪಡೆಯಬೇಕಿದ್ದರೆ?... 52 ಕೋಟಿ ರೂ. ಕಕ್ಕಬೇಕು!

ಹೌದು. ದುಬೈಯಲ್ಲಿ ಉದ್ಯಮಿಯೊಬ್ಬ ತನ್ನ ಕಾರು ಕೊಳ್ಳಲು ನೀಡಿದ್ದ ಹಣಕ್ಕಿಂತ ಕೋಟಿಗಟ್ಟಲೆ ಹೆಚ್ಚು ಹಣವನ್ನು ಅದರ ನಂಬರ್ ಪ್ಲೇಟ್‌ಗೇ ವ್ಯಯಿಸಿದ್ದಾರೆ. ಇದೀಗ ಅಬುಧಾಬಿ ಉದ್ಯಮಿ ಖರೀದಿಸಿದ ಈ ನಂ.1 ಲೈಸೆನ್ಸ್ ಪ್ಲೇಟ್ ಅತ್ಯಧಿಕ ವೆಚ್ಚಕ್ಕಾಗಿ ವಿಶ್ವ ದಾಖಲೆ ಮಾಡಿದೆ. ಅಬುಧಾಬಿಯಲ್ಲಿ ಭಾನುವಾರ ಹರಾಜು ಸಂದರ್ಭ ಈ ಪರಿ ಮೊತ್ತಕ್ಕೆ ನಂಬರ್ ಪ್ಲೇಟ್ ಹರಾಜಾಗಿದೆ.

ಎಮಿರೇಟ್ಸ್ ಪ್ಯಾಲೇಸ್ ಹೋಟೆಲಿನಲ್ಲಿ ನಡೆದ ಈ ಹರಾಜಿನಲ್ಲಿ ವಿಜೇತರಾದವರು 25ರ ಹರೆಯದ ಉದ್ಯಮಿ ಸಯೀದ್ ಅಲ್ ಖೌರಿ. ಅವರು ಇಷ್ಟು ಮೊತ್ತದ ಹಣ ನೀಡಿ ಈ ಹಿಂದಿನ ವಿಶ್ವದಾಖಲೆಯನ್ನು ದುಪ್ಪಟ್ಟು ಹಣ ನೀಡಿ ಮುರಿದಿದ್ದಾರೆ.

ವಿಶೇಷವೆಂದರೆ, ಈ ಹಿಂದಿನ ದಾಖಲೆ ಮಾಡಿದ್ದು ಮತ್ತಾರೂ ಅಲ್ಲ, ಇದೇ ಉದ್ಯಮಿಯ ಸೋದರ ಸಂಬಂಧಿ ತಲಾಲ್ ಅಲಿ ಮಹಮದ್ ಖೌರಿ. ಅವರು ನಂ.5 ಪ್ಲೇಟನ್ನು 25.2 ದಶಲಕ್ಷ ದಿರ್‌ಹಂ ನೀಡಿ ವಿಶ್ವದಾಖಲೆ ಸ್ಥಾಪಿಸಿದ್ದರು.

ಏನೇ ಮಾಡಿಯಾದರೂ ಈ ನಂಬರ್ ಪ್ಲೇಟ್ ಖರೀದಿಸಿಯೇ ಸಿದ್ಧ ಎಂದು ಪಣ ತೊಟ್ಟಿದ್ದುದಾಗಿ ಅಲ್ ಖೌರಿ ಅವರು ಗಲ್ಫ್ ನ್ಯೂಸ್‌ಗೆ ತಿಳಿಸಿದ್ದಾರೆ.

ಇದನ್ನು ವೈಯಕ್ತಿಕ ಬಳಕೆಗಾಗಿಯೇ ಖರೀದಿಸಿದ್ದೇನೆ. ಪುನಃ ಮಾರಾಟ ಮಾಡುವ ಉದ್ದೇಶ ಹೊಂದಿಲ್ಲ ಎಂದಿರುವ ಖೌರಿ, ಬೇರೆ ಸರಣಿಯಲ್ಲಿ ನಂ.1 ಸಂಖ್ಯೆ ಬಂದರೆ, ಅದನ್ನು ಖರೀದಿಸಲೂ ಯತ್ನಿಸುವುದಾಗಿ ಹೇಳಿದ್ದಾರೆ.

ಈ ನಂಬರ್ ಪ್ಲೇಟ್‌ಗೆ ದೊರೆತ ಹಣವು ನಮ್ಮೆಲ್ಲಾ ನಿರೀಕ್ಷೆಗಳ ಮಿತಿಯನ್ನು ಮೀರಿದೆ ಎಂದು ಅಧಿಕೃತ ಹರಾಜು ಸಂಸ್ಥೆ ಎಮಿರೇಟ್ಸ್ ಆಕ್ಷನ್‌ನ ಆಡಳಿತ ನಿರ್ದೇಶಕ ಅಬ್ದುಲ್ಲಾ ಮತಾರ್ ಅಲ್ ಮನ್ನೇ ತಿಳಿಸಿದ್ದಾರೆ. ಹರಾಜಿನಲ್ಲಿ ದೊರೆತ ಹಣವನ್ನು ಅಪಘಾತದಲ್ಲಿ ಗಾಯಗೊಂಡವರಿಗಾಗಿ ಅಬುಧಾಬಿಯಲ್ಲಿ ವಿಶೇಷ ಆಸ್ಪತ್ರೆ ಕಟ್ಟಿಸಲು ಬಳಸಲಾಗುತ್ತದೆ.
ಮತ್ತಷ್ಟು
ಪಾಕ್ ಚುನಾವಣೆಗೆ ರಕ್ತಸಿಕ್ತ ಆರಂಭ
ಲಂಕಾ: ಪಾಕ್‌ನಿಂದ ಶಸ್ತ್ರಾಸ್ತ್ರ ಖರೀದಿ
ಚುನಾವಣೆ: ಪಾಕ್‌ನಲ್ಲಿ ಹೆಚ್ಚಿದ ಭದ್ರತೆ
ಪಾಕ್: ಪಿಪಿಪಿ ಕಚೇರಿ ಹೊರಗಡೆ ಸ್ಫೋಟ, 12 ಸಾವು
ಪ್ರವಾದಿ ವ್ಯಂಗ್ಯಚಿತ್ರ ಮರುಮುದ್ರಣಕ್ಕೆ ಬಾಂಗ್ಲಾ ಖಂಡನೆ
ಶೀಘ್ರ ಶರೀಫ್, ಜರ್ದಾರಿ ಮಾತುಕತೆ