ಪಾಕಿಸ್ತಾನವು ಹಿಂದೆಂದೂ ಕಾಣದ ಬಿಗಿ ಭದ್ರತೆಯಲ್ಲಿ ಮಹಾ ಚುನಾವಣೆಗಾಗಿ ಮತದಾನ ನಡೆಯುತ್ತಿದ್ದು, ನಿಧಾನಗತಿಯ ಮತದಾನ ನಡೆಯುತ್ತಿದೆ.
ಅಧ್ಯಕ್ಷ ಪರ್ವೇಜ್ ಮುಶರಫ್, ಉಸ್ತುವಾರಿ ಪ್ರಧಾನಿ ಮೊಹಮ್ಮದ್ಮಿಯನ್ ಸೂಮ್ರೊ ಹಾಗೂ ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತಚಲಾಯಿಸಿದ ರಾಜಕಾರಣಿಗಳಲ್ಲಿ ಪ್ರಮುಖರಾಗಿದ್ದಾರೆ.
ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಮೂಡಿ ಬರಲಿದೆ ಎಂದು ನಿರೀಕ್ಷಿಸಲಾಗಿರುವ ಪಿಪಿಪಿಯ ಜರ್ದಾರಿ ಸಿಂಧ್ ಪ್ರಾಂತ್ಯದ ನವಾಬ್ ಶಾದಲ್ಲಿ ಬಿಗಿ ಭದ್ರತೆಯಲ್ಲಿ ತೆರಳಿ ಮತಚಲಾಯಿಸಿದರು.
ಗುಂಡುನಿರೋಧಕ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ ಅವರನ್ನು ಮತಗಟ್ಟೆಗೆ ತೆರಳುವಾಗ ಖಾಸಗಿ ಭದ್ರತಾ ಸಿಬ್ಬಂದಿಗಳು ಸುತ್ತುವರಿದಿದ್ದರು. ಸುಮಾರು ದಶಕಗಳಿಂದ ತನ್ನ ಪರಮಾಧಿಕಾರವನ್ನು ಚಲಾಯಿಸದೇ ಇದ್ದ ಜರ್ದಾರಿ, ಮತಚಲಾಯಿಸಲು ತುಂಬ ಸಂತಸವಾಗುತ್ತದೆ ಎಂದು ನುಡಿದರು. ತನ್ನ ಬೆಂಬಲಿಗರಿಗೆ ವಿಜಯದ ಚಿನ್ನೆ ಸೂಚಿಸಿ ಅವರು ಮತಗಟ್ಟೆಯಿಂದ ತೆರಳಿದರು.
|