ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿನಲ್ಲಿ ಅಲ್ಪಾವಧಿ ಮೈತ್ರಿ ಸರಕಾರ: ಗಿಣಿಶಾಸ್ತ್ರ
ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮರು ಆಯ್ಕೆ ಹಾಗೂ ಮಹಾ ಚುನಾವಣೆಗಳು ಮುಂದೂಡಲ್ಪಡುತ್ತವೆ ಎಂದು ಭವಿಷ್ಯ ನುಡಿದಿದ್ದ ಗಿಣಿಶಾಸ್ತ್ರ ತಜ್ಞ (ಟ್ಯಾರಟ್ ಕಾರ್ಡ್ ರೀಡರ್) ಒಬ್ಬರು, ಇದೀಗ ಪಾಕಿಸ್ತಾನದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹಾಗೂ ಪಿಎಂಎಲ್(ಎನ್)ಗಳು ಜಂಟಿಯಾಗಿ ಅಲ್ಪಾವಧಿಯ ಸರಕಾರ ರಚಿಸಲಿವೆ ಎಂದು ಹೇಳಿದ್ದಾರೆ.

ಬೇಗಂ ಶಗುಫ್ತಾ ಅನ್ವರ್ ಎಂಬ ಪಾಕಿಸ್ತಾನಿ ಗಿಣಿಶಾಸ್ತ್ರ ತಜ್ಞೆ ಕಳೆದ ವರ್ಷ ಭವಿಷ್ಯ ನುಡಿದು ಎಲ್ಲರ ಗಮನ ಸೆಳೆದಿದ್ದರು. ಹತ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಪಿಪಿಪಿ ಹಾಗೂ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್)ಗಳು ಕೇಂದ್ರದಲ್ಲಿ ಸಮ್ಮಿಶ್ರ ಸರಕಾರ ರಚಿಸಲಿವೆ ಎಂದಿದ್ದಾರೆ, ಆದರೆ ಮುಂದಿನ ಸಂಸತ್ತು ಕೇವಲ ಅಲ್ಪಾವಧಿಯದಾಗಿರುತ್ತದೆ. 2009ರಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ ಎಂದೂ ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮುಹಮ್ಮದ್ ಚೌಧುರಿ ಅವರ ಉಚ್ಚಾಟನೆ ಹಾಗೂ ಮಾಜಿ ಪ್ರಧಾನಿ ಶೌಕತ್ ಅಜೀಜ್ ಅವರ ರಾಜಕೀಯ ವೃತ್ತಿ ಜೀವನದ ಅಂತ್ಯದ ಕುರಿತಾಗಿಯೂ ಬೇಗಂ ಭವಿಷ್ಯ ನುಡಿದಿದ್ದರು. ಶೌಕತ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿಲ್ಲ.

ಸೋಮವಾರದ ಮಹಾ ಚುನಾವಣೆಗಳ ಬಳಿಕ ರಚನೆಗೊಳ್ಳುವ ಸಂಸತ್ತು ಒಂದು ವರ್ಷವೂ ಉಳಿಯುವುದಿಲ್ಲ. 2009ರಲ್ಲಿ ಮತ್ತೆ ಚುನಾವಣೆಗಳನ್ನು ಘೋಷಿಸಬೇಕಾಗುತ್ತದೆ ಎಂದು ಅವರು ಹೇಳಿರುವುದಾಗಿ ಫ್ರಾಂಟಿಯರ್ ಪೋಸ್ಟ್ ವರದಿ ಮಾಡಿದೆ. ಆಕೆಯ ಭವಿಷ್ಯ ಲೆಕ್ಕಾಚಾರ ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಿಪಿಪಿಗೆ 140ರಿಂದ 150ರಷ್ಟು ಸ್ಥಾನಗಳು ಲಭ್ಯವಾಗಲಿದ್ದರೆ, ಪಿಎಎಲ್-ಎನ್‌ಗೆ 80ರಿಂದ 90 ಕ್ಷೇತ್ರಗಳು ಕೈವಶವಾಗಲಿವೆ. ಆಡಳಿತಾರೂಢ ಪಿಎಂಎಲ್-ಕ್ಯೂ ಪಕ್ಷಕ್ಕೆ ಕೇವಲ 20ರಿಂದ 25 ಸ್ಥಾನಗಳು ದೊರೆಯಲಿವೆ.

ರಾಜಕೀಯವಾಗಿ ಮಹತ್ವಪೂರ್ಣವಾಗಿರುವ ಪಂಜಾಬ್ ಪ್ರಾಂತ್ಯದಲ್ಲಿ, ಪಿಎಂಎಲ್-ಎನ್ 90ರಿಂದ 100 ಸ್ಥಾನ ಗೆದ್ದುಕೊಳ್ಳುವ ಮೂಲಕ ಪ್ರಾಂತೀಯ ಅಸೆಂಬ್ಲಿಯಲ್ಲಿ ವಿಜಯಶಾಲಿಯಾಗುತ್ತದೆ. ಪಿಪಿಪಿ 90ರಷಅಟು ಸ್ಥಾನಗಳನ್ನೂ, ಪಿಎಂಎಲ್-ಕ್ಯೂ 70ರಿಂದ 80 ಸ್ಥಾನಗಳನ್ನೂ ಪಡೆದುಕೊಳ್ಳಲಿವೆ ಎಂದು ಆಕೆ ತಿಳಿಸಿದ್ದಾರೆ. ಆದರೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯು ಪಿಪಿಪಿಯಿಂದಲೇ ಆಯ್ಕೆಯಾಗುತ್ತಾರೆ ಎಂದೂ ಆಕೆ ಹೇಳಿದ್ದಾರೆ.

ಪಿಪಿಪಿ-ಪಿಎಂಎಲ್-ಎನ್ ಸಮ್ಮಿಶ್ರ ಸರಕಾರದ ಕಾರ್ಯವಿಧಾನವು ಸುಲಲಿತವಾಗಿರುವುದಿಲ್ಲ. ಅದು ನಿರೀಕ್ಷಿಸುವುದಕ್ಕಿಂತ ಮೊದಲೇ ಬಿಕ್ಕಟ್ಟು ಎದುರಿಸುತ್ತದೆ ಎಂದು ಆಕೆ ಹೇಳಿದ್ದಾರೆ.
ಮತ್ತಷ್ಟು
ಪಾಕ್: ಮತ ಚಲಾಯಿಸಿದ ಮುಶ್, ಜರ್ದಾರಿ
ನಂ.1 ಬೇಕಿದ್ದರೆ ಕೇವಲ 52 ಕೋಟಿ ರೂ. ನೀಡಿ!
ಪಾಕ್ ಚುನಾವಣೆಗೆ ರಕ್ತಸಿಕ್ತ ಆರಂಭ
ಲಂಕಾ: ಪಾಕ್‌ನಿಂದ ಶಸ್ತ್ರಾಸ್ತ್ರ ಖರೀದಿ
ಚುನಾವಣೆ: ಪಾಕ್‌ನಲ್ಲಿ ಹೆಚ್ಚಿದ ಭದ್ರತೆ
ಪಾಕ್: ಪಿಪಿಪಿ ಕಚೇರಿ ಹೊರಗಡೆ ಸ್ಫೋಟ, 12 ಸಾವು