ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನ: ಶರೀಫ್, ಬೇನಜೀರ್ ಪಕ್ಷಗಳ ಮೇಲುಗೈ
ಎಲ್ಲರ ಕುತೂಹಲ ಕೆರಳಿಸಿರುವ ಪಾಕಿಸ್ತಾನ ಮಹಾ ಚುನಾವಣೆಯ ಫಲಿತಾಂಶಗಳು ಬರತೊಡಗಿದ್ದು, ಪ್ರತಿಪಕ್ಷಗಳಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಹಾಗೂ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪಿಎಂಎಲ್(ಎನ್)ಗಳು ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ ಪಿಎಂಎಲ್(ಕ್ಯೂ) ತೀವ್ರ ಹಿನ್ನಡೆ ಅನುಭವಿಸಿದೆ.

ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ನಡೆದ ಚುನಾವಣೆಯಲ್ಲಿ ಅತ್ಯಂತ ಮಹತ್ವದ್ದೆನ್ನಲಾಗುತ್ತಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಚುನಾವಣೆಗಳಲ್ಲಿ ಶರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ ಮುನ್ನಡೆ ಸಾಧಿಸಿದ್ದರೆ, ಮುಷರಫ್ ಪರವಾಗಿರುವ ಪಿಎಂಎಲ್-ಕ್ಯೂ ಎಲ್ಲ ಕಡೆ ಸೋಲನುಭವಿಸುತ್ತಿದೆ. ಹಾಲಿ ಸರಕಾರದ ಪ್ರಮುಖ ಮಂತ್ರಿಗಳೆಲ್ಲರೂ ಸೋಲಿನ ದವಡೆಯಲ್ಲಿದ್ದಾರೆ. ಬೇನಜೀರ್ ಅವರ ಪಿಪಿಪಿ ಸಿಂಧ್ ಪ್ರಾಂತ್ಯದಲ್ಲಿ ಮೇಲುಗೈ ಸಾಧಿಸುತ್ತಿದೆ.

ಮತ ಎಣಿಕೆ ಕಾರ್ಯವು ಸೋಮವಾರ ರಾತ್ರಿಯೇ ಆರಂಭಗೊಂಡಿದ್ದು, ಇಂದು ಸಂಜೆಯೊಳಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ.

ಚುನಾವಣಾ ಆಯೋಗ ನೀಡಿರುವ ಮಾಹಿತಿಯಂತೆ ಸೋಮವಾರ ನಡೆದ ಚುನಾವಣೆಯಲ್ಲಿ ಕೇವಲ ಶೇ.35ರಷ್ಟು ಮತದಾನವಾಗಿತ್ತು. ಮತದಾನಕ್ಕೆ ಸಂಬಂಧಿಸಿದ ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

ಚುನಾವಣೆಯ ಹಿನ್ನೆಲೆಯಲ್ಲಿ ಸರಕಾರವು ಹಿಂದೆಂದೂ ಕಾಣದ ಭಾರೀ ಬಂದೋಬಸ್ತ್ ಏರ್ಪಡಿಸಿತ್ತು. 81 ಸಾವಿರ ಸೇನಾ ಪಡೆಗಳು ಹಾಗೂ ನಾಲ್ಕು ಲಕ್ಷ ಪೊಲೀಸರನ್ನು ಪಾಕಿಸ್ತಾನದಾದ್ಯಂತ ನಿಯೋಜಿಸಲಾಗಿತ್ತು.

ಪಾಕಿಸ್ತಾನ ಚುನಾವಣೆ ಘೋಷಣೆಯ ಬಳಿಕ ಸಾಕಷ್ಟು ಹಿಂಸಾಚಾರ ಕಂಡ ಪಾಕಿಸ್ತಾನದಲ್ಲಿ, ಚುನಾವಣಾ ಪ್ರಚಾರ ವೇಳೆಗೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋರನ್ನು ಹತ್ಯೆ ಮಾಡಲಾಗಿತ್ತು.
ಮತ್ತಷ್ಟು
ಪಾಕಿನಲ್ಲಿ ಅಲ್ಪಾವಧಿ ಮೈತ್ರಿ ಸರಕಾರ: ಗಿಣಿಶಾಸ್ತ್ರ
ಪಾಕ್: ಮತ ಚಲಾಯಿಸಿದ ಮುಶ್, ಜರ್ದಾರಿ
ನಂ.1 ಬೇಕಿದ್ದರೆ ಕೇವಲ 52 ಕೋಟಿ ರೂ. ನೀಡಿ!
ಪಾಕ್ ಚುನಾವಣೆಗೆ ರಕ್ತಸಿಕ್ತ ಆರಂಭ
ಲಂಕಾ: ಪಾಕ್‌ನಿಂದ ಶಸ್ತ್ರಾಸ್ತ್ರ ಖರೀದಿ
ಚುನಾವಣೆ: ಪಾಕ್‌ನಲ್ಲಿ ಹೆಚ್ಚಿದ ಭದ್ರತೆ