ಬುಧವಾರದ ಪೂರ್ಣ ಚಂದ್ರಗ್ರಹಣದಲ್ಲಿ ಚಂದ್ರ ತನ್ನ ಬಣ್ಣವನ್ನು ಸಂಪೂರ್ಣ ಬದಲಾಯಿಸಲಿದ್ದು, ಮಹಾದಾನಂದ ನೀಡುವ ವರ್ಣಕ್ಕೆ ತಿರುಗಲಿದ್ದಾನೆ. ಆದರೆ ಚಂದ್ರನ ಈ ಮನಮೋಹಕ ನೋಟವನ್ನು ಭಾರತದಲ್ಲಿ ವೀಕ್ಷಿಸುವಂತಿಲ್ಲ. ದಕ್ಷಿಣ ಅಮೇರಿಕದವರು ಮತ್ತು ಹೆಚ್ಚಿನ ಉತ್ತರ ಅಮೇರಿದವರು ಅಪರೂಪದ 'ಚಂದ್ರಕಾವ್ಯ'ದ ವೀಕ್ಷಣೆಯ ಭಾಗ್ಯ ಹೊಂದಿದ್ದಾರೆ.
ಬುಧವಾರ ಸುಮಾರು ಮೂರು ಗಂಟೆ 26 ನಿಮಿಷಗಳ ಕಾಲದ ಈ ಸಂಪೂರ್ಣ ಗ್ರಹಣದ ವೇಳೆಗೆ ಆಗಸದ ಚಂದಿರ ನಸು ಕೇಸರಿಯಿಂದ ರಕ್ತಕೆಂಪು ಇಲ್ಲವೇ ಗೋಮೇದಕ(ಹಸಿರು ನೀಲಿ) ಬಣ್ಣಕ್ಕೂ ತಿರುಗಬಹುದು ಎಂಬುದಾಗಿ ಬಾಹ್ಯಾಕಾಶ ತಜ್ಞರು ಹೇಳಿದ್ದಾರೆ.
ಚಂದ್ರನ ಈ ನಾಟಕೀಯ ಬಣ್ಣ ಬದಲಾವಣೆಯನ್ನು ಪಶ್ಚಿಮ ಯೂರೋಪ್, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಲ್ಲೂ ಗುರುವಾರ ಅಂದ ಫೆ.21ರಂದು ವೀಕ್ಷಿಸಬಹುದಾಗಿದೆ ಎಂಬುದಾಗಿ ನಾಸಾ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.
ಹೆಚ್ಚಿನ ಗ್ರಹಣಗಳ ವೇಳೆ ಚಂದ್ರ ಕಪ್ಪಾಗುತ್ತಾನೆ. ಜ್ವಾಲಾಮುಖಿಯ ಅನಿಲ ಮತ್ತು ಧೂಳು ಸೂರ್ಯನ ಬೆಳಕು ಚಂದಿರನ ತಲುಪುವಿಕೆಯನ್ನು ತಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಬೃಹತ್ ಜ್ವಾಲಾಮುಖಿ ಸ್ಫೋಟವಾಗದ ಕಾರಣ ಚಂದಿರನು ರಕುತ ಕೆಂಪು ಇಲ್ಲವೇ ಕಿತ್ತಳೆ ಹಳದಿಬಣ್ಣಕ್ಕೆ ತಿರುಗಬಹುದಾಗಿದೆ ಎಂಬುದು ನಾಸಾದ ಅಂಬೋಣ.
ಗ್ರಹಣ ಕಾಲದ ವಾತಾವರಣಕ್ಕನುಗುಣವಾಗಿ ಬಣ್ಣವು ಬದಲಾಗಬಹುದು ಎಂದು ಮಿಯಾಮಿ ಬಾಹ್ಯಾಕಾಶ ವೀಕ್ಷಣಾ ಕೇಂದ್ರದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
|