ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒತ್ತಡದಲ್ಲಿ ಮುಶರಫ್, ಸಮ್ಮಿಶ್ರ ಸರಕಾರಕ್ಕೆ ಸಿದ್ಧತೆ
ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಮೇಲ್ಗೈ ಸಾಧಿಸಿದ್ದು, ಅಧ್ಯಕ್ಷ ಮುಶರಫ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆಡಳಿತಾರೂಢ ಪಾಕಿಸ್ತಾನ ಮುಸ್ಲಿಂ ಲೀಗ್(ಪಿಎಂಎಲ್-ಕ್ಯೂ) ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.

ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೂ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯು ಒಟ್ಟು 87 ಸ್ಥಾನಗಳನ್ನು ಗಳಿಸಿ ಚುನಾವಣಾ ವಿಜೇತ ಅತಿ ದೊಡ್ಡಪಕ್ಷವಾಗಿ ಮೂಡಿಬಂದಿದೆ. 66 ಸ್ಥಾನಗಳನ್ನು ಗಳಿಸಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್(ಪಿಎಂಎಲ್-ಎನ್) 66 ಸ್ಥಾನಗಳನ್ನು ಪಡೆದಿದೆ. ಮುಶರಫ್ ಅವರ ಪಿಎಂಎಲ್-ಕ್ಯೂ38 ಸ್ಥಾನಗಳನ್ನಷ್ಟೆ ಗಳಿಸಲು ಶಕ್ತವಾಗಿದೆ. ಮುತ್ತಾಹಿದ ಕ್ವಾಮಿ ಮೂವ್‌ಮೆಂಟ್(ಎಂಕ್ಯೂಎಂ)19 ಸ್ಥಾನಗಳನ್ನು ಗಳಿಸಿದರೆ, ಪಾಕಿಸ್ತಾನ್ ನ್ಯಾಶನಲಿಸ್ಟ್ ಅವಾಮಿ ನ್ಯಾಶನಲ್ ಪಾರ್ಟಿ 10 ಸ್ಥಾನಗಳನ್ನು ಪಡೆದಿದೆ. 2002ರಲ್ಲಿ 59 ಸ್ಥಾನಪಡೆದಿದ್ದ ಧಾರ್ಮಿಕ ಮೈತ್ರಿ ಕೂಟ ಮುತ್ತಾಹಿದ ಮಜ್ಲಿಸ್ ಇ-ಅಮಲ್ ಕೇವಲ ಮೂರು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಪಿಪಿಪಿಯ ಸಹ-ಅಧ್ಯಕ್ಷ ದಿವಂಗತ ಬೆನಜೀರ್ ಭುಟ್ಚೋ ಅವರ ಪತಿ ಅಸಿಫ್ ಅಲಿ ಜರ್ದಾರಿ ಮಿತ್ರ ಪಕ್ಷಗಳೊಂದಿಗೆ ಸರಕಾರ ರೂಪಿಸುವುದಾಗಿ ಹೇಳಿದ್ದಾರೆ. ಪಕ್ಷವು ಸಿಂಧ್ ಪ್ರಾಂತ್ಯದಲ್ಲಿ ಪಿಪಿಪಿಯು ನಿಚ್ಚಳ ಬಹುಮತ ಗಳಿಸಿದ್ದರೆ, ಇತರ ಮೂರು ಪ್ರಾಂತ್ಯಗಳಲ್ಲಿ ಸಂಯುಕ್ತ ಸರಕಾರ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಲಿದೆ.

ಮುಶರಫ್ ಪಕ್ಷವು ಹೀನಾಯ ಸೋಲು ಕಂಡಿರುವುದಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ಮತ್ತಷ್ಟು
ಬಾನಲ್ಲಿ ಮೂಡಲಿರುವ ಅಪರೂಪದ 'ಚಂದ್ರಕಾವ್ಯ'
ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ರಾಜೀನಾಮೆ
ಸರಕಾರ ರಚನೆಯತ್ತ ಜರ್ದಾರಿ-ಶರೀಫ್
ಪಾಕಿಸ್ತಾನ: ಶರೀಫ್, ಬೇನಜೀರ್ ಪಕ್ಷಗಳ ಮೇಲುಗೈ
ಪಾಕಿನಲ್ಲಿ ಅಲ್ಪಾವಧಿ ಮೈತ್ರಿ ಸರಕಾರ: ಗಿಣಿಶಾಸ್ತ್ರ
ಪಾಕ್: ಮತ ಚಲಾಯಿಸಿದ ಮುಶ್, ಜರ್ದಾರಿ