ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜರ್ದಾರಿ ಒಲೈಕೆಯಲ್ಲಿ ಮುಶ್ ನಿಕಟವರ್ತಿಗಳು
ಪಾಕಿಸ್ತಾನದ ಮಹಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿರುವ ಪಕ್ಷಗಳೆರಡರ ನಾಯಕರ ಅತ್ಯಂತ ನಿರ್ಣಾಯಕ ಭೇಟಿಗೆ ಮುಂಚಿತವಾಗಿ ಪಿಪಿಪಿಯ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯವರನ್ನು ಮುಶರಫ್ ನಿಕಟವರ್ತಿಗಳು ಭೇಟಿಯಾಗಿದ್ದು, ನವಾಜ್ ಶರೀಫರ ಪಿಎಂಎಲ್-ಎನ್ ಜತೆಗೆ ಕೈ ಜೋಡಿಸಬಾರದು ಎಂದು ವಿನಂತಿಸಿದ್ದಾರಲ್ಲದೆ, ಪಿಪಿಪಿಯ ಸಂಭಾವ್ಯ ಪ್ರಧಾನಿ ಅಭ್ಯರ್ಥಿಗಳ ಕುರಿತು ಮಾತುಕತೆ ನಡೆಸಿದ್ದಾರೆನ್ನಲಾಗಿದೆ.

ಮುಂದಿನ ಸರಕಾರದ ಸ್ಥಾಪನೆ ಕುರಿತು ಮುಶರಫ್ ಅವರ ಸಹಚರರು ಚುನಾವಣಾ ಬಳಿಕ ಪ್ರಥಮ ಬಾರಿಗೆ ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಡಾನ್ ಸುದ್ದಿವಾಹಿನಿ ವರದಿ ಮಾಡಿದೆ.

ಪಾಕಿಸ್ತಾನ ಸಂಸತ್ತಿನ 268 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಿಪಿಪಿಯು 87 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಜರ್ದಾರಿ ಹಾಗೂ ಮಾಜಿಪ್ರಧಾನಿ ನವಾಜ್ ಶರೀಫ್ ಅವರು ಗುರುವಾರ ಭೇಟಿಮಾಡಿ ಮಾತುಕತೆ ನಡೆಸಲಿದ್ದು, ಈ ಇಬ್ಬರ ಪಕ್ಷಗಳ ಸಂಯುಕ್ತ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.

ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ತಾರಿಕ್ ಅಜೀಜ್ ಸೇರಿದಂತೆ ಮುಶರಫ್ ಅವರ ನಿಕಟವರ್ತಿಗಳು ಜರ್ದಾರಿಯವರನ್ನು ಭೇಟಿಮಾಡಿ, ಪಿಎಂಎಲ್-ಎನ್ ಜತೆ ಕೈಜೋಡಿಸಬಾರದು ಎಂದು ಒತ್ತಾಯಿಸಿದರೆಂದು ವರದಿ ತಿಳಿಸಿದೆ.
ಮತ್ತಷ್ಟು
ಕಾನೂನು ಪಾಲಿಸಿ, ಭಾರತೀಯರಿಗೆ ಬಹರೈನ್ ತಾಕೀತು
ಮುಶ್, ಹೊಸ ಸರಕಾರಕ್ಕೆ ಅಮೆರಿಕ ಸಹಕಾರ
ಒತ್ತಡದಲ್ಲಿ ಮುಶರಫ್, ಸಮ್ಮಿಶ್ರ ಸರಕಾರಕ್ಕೆ ಸಿದ್ಧತೆ
ಬಾನಲ್ಲಿ ಮೂಡಲಿರುವ ಅಪರೂಪದ 'ಚಂದ್ರಕಾವ್ಯ'
ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ರಾಜೀನಾಮೆ
ಸರಕಾರ ರಚನೆಯತ್ತ ಜರ್ದಾರಿ-ಶರೀಫ್