ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟನ್ನಿನಲ್ಲಿ ಸಜ್ಜಾಗಿರುವ ಪ್ರಥಮ ಹಿಂದೂ ಶಾಲೆ
ಬ್ರಿಟನ್ನಿನಲ್ಲಿ ಪ್ರಥಮ ಸರಕಾರಿ ಹಿಂದೂ ಶಾಲೆಯು ಸೆಪ್ಟೆಂಬರ್ 2008ರಿಂದ ಹ್ಯಾರೊದಲ್ಲಿ ಆರಂಭ ಗೊಳ್ಳಲಿದೆ.

ಕೃಷ್ಣ ಅವಂತಿ ಪ್ರಾಥಮಿಕ ಶಾಲೆ ಎಂದು ಕರೆಸಿಕೊಳ್ಳಲಿರುವ ಈ ಶಾಲೆಯು ಮೊದಲ ಬ್ಯಾಚಿಗೆ 30 ವಿದ್ಯಾರ್ಥಿಗಳನ್ನು ಸೇರಿಕೊಳ್ಳಲಿದೆ. 2016ರ ತನಕ ಪ್ರತಿವರ್ಷ 30 ವಿದ್ಯಾರ್ಥಿಗಳು ಈ ಶಾಲೆಗೆ ಸೇರಲಿದ್ದಾರೆ.

ಹ್ಯಾರೊದಲ್ಲಿ ಸುಮಾರು 40 ಸಾವಿರ ಹಿಂದೂಗಳು ನೆಲೆಸಿದ್ದು, ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ. 19.6ರಷ್ಟು ಹಿಂದೂಗಳು. ಶಿಕ್ಷಣ ಇಲಾಖೆಯು ಹಿಂದೂ ಶಾಲೆಯನ್ನು ಸ್ಥಾಪಿಸುವುದಾಗಿ 2005ರ ನವೆಂಬರ್‌ನಲ್ಲಿ ಘೋಷಿಸಿತ್ತು. 10 ದಶಲಕ್ಷ ಪೌಂಡ್ ವೆಚ್ಚದಲ್ಲಿ ಪ್ರಮುಖ ಹಿಂದೂ ಚಾರಿಟಿ ಸಂಸ್ಥೆಯಾಗಿರುವ ಐ ಪ್ರತಿಷ್ಠಾನವು ಈ ಶಾಲೆಯನ್ನು ನಿರ್ಮಿಸಿದೆ.

ತಮ್ಮ ನಂಬುಗೆಗೆ ಅನುಗುಣವಾಗಿ ಹಿಂದುಗಳು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಆಯ್ಕೆ ನೀಡುವುದು ಈ ಶಾಲೆಯ ಉದ್ದೇಶವಾಗಿದೆ. ಬ್ರಿಟನ್ನಿನಲ್ಲಿ ಎಲ್ಲ ಪ್ರಮುಖ ಧರ್ಮಗಳಿಗೆ ಸ್ವಯಂ ಅನುದಾನಿತ ಶಾಲೆಗಳಿದ್ದು ಹಿಂದೂಗಳು ಈ ಅವಕಾಶದಿಂದ ವಂಚಿತರಾಗಬಾರದು ಎಂಬುದಾಗಿ ಐ-ಪ್ರತಿಷ್ಠಾನದ ನಿತೀಶ್ ಗೋರ್ ಹೇಳಿದ್ದಾರೆ.
ಮತ್ತಷ್ಟು
ಜರ್ದಾರಿ ಒಲೈಕೆಯಲ್ಲಿ ಮುಶ್ ನಿಕಟವರ್ತಿಗಳು
ಕಾನೂನು ಪಾಲಿಸಿ, ಭಾರತೀಯರಿಗೆ ಬಹರೈನ್ ತಾಕೀತು
ಮುಶ್, ಹೊಸ ಸರಕಾರಕ್ಕೆ ಅಮೆರಿಕ ಸಹಕಾರ
ಒತ್ತಡದಲ್ಲಿ ಮುಶರಫ್, ಸಮ್ಮಿಶ್ರ ಸರಕಾರಕ್ಕೆ ಸಿದ್ಧತೆ
ಬಾನಲ್ಲಿ ಮೂಡಲಿರುವ ಅಪರೂಪದ 'ಚಂದ್ರಕಾವ್ಯ'
ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ರಾಜೀನಾಮೆ