ಅಮೆರಿಕದ ಅಂಕೆ ತಪ್ಪಿರುವ ಬೇಹುಗಾರಿಕಾ ಉಪಗ್ರವೊಂದು ಭೂಮಿಗೆ ಬೀಳುವ ಮುನ್ನವೇ ಅದನ್ನು ಧ್ವಂಸ ಮಾಡಲು ನೌಕಾ ಕ್ಷಿಪಣಿಯೊಂದರ ಮೂಲಕ ಪ್ರಯತ್ನಿಸಲಾಗುತ್ತಿದೆ.
ಆದರೆ, ಬುಧವಾರ ರಾತ್ರಿ ಭೂಮಿಗೆ ಮರಳಬಹುದೆಂದು ನಿರೀಕ್ಷಿಸಲಾಗಿರುವ ಉಪಗ್ರಹವಿದಲ್ಲ.
ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅವರಿಂದ ಅಂಗೀಕಾರ ಪಡೆದಿರುವ ಈ ಉಪಗ್ರಹದ ಮೇಲಿನ ದಾಳಿ ಪ್ರಯತ್ನವನ್ನು ಉಪಗ್ರಹದಲ್ಲಿರುವ ಟಾಕ್ಸಿಕ್ ಇಂಧನದ ಕಾಳಜಿಯಿಂದಾಗಿ ಮಾಡಲಾಗುತ್ತಿದೆ. ಮೂರು ಹಂತದ ದಾಳಿಯ ಸಾಮರ್ಥ್ಯವುಳ್ಳ ನೌಕಾ ಕ್ಷಿಪಣಿ ಎಸ್ಎಂ-3ಯನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದೆ. 2002ರಿಂದ ನಡೆದ ಪರೀಕ್ಷಾ ಸರಣಿಗಳಲ್ಲಿ ಇದು ದೊಡ್ಡಮಟ್ಟದ ಯಶಸ್ಸು ಸಾಧಿಸಿದೆ.
ಆದರೆ, ಎಸ್ಎಂ-3 ಇದುವರೆಗೆ ಅಲ್ಪ ಅಥವಾ ಮಧ್ಯಮಗಾಮಿ ಕ್ಷಿಪಣಿಯನ್ನು ಗುರಿಯಾಗಿಸಿತ್ತೇ ವಿನಹ ಉಪಗ್ರಹವನ್ನು ಗುರಿಯಾಗಿಸಿ ಎಂದೂ ಪರೀಕ್ಷೆ ನಡೆಸಿಲ್ಲ. ಕ್ಷಿಪಣಿಯನ್ನು ಉಪಗ್ರಹ ವಿರೋಧಿಯಾಗಿಸುವ ಯೋಜನೆಯನ್ನು ವಾರದೊಳಗಾಗಿ ಮಾಡಲಾಗಿದೆ ಎಂದು ಹೇಳಿರುವ ನೌಕಾ ಅಧಿಕಾರಿಗಳು ಉಪಗ್ರಹವು ಕೆಳಗಿಳಿದ ಬಳಿಕ ಬದಲಾವಣೆಯನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದ್ದಾರೆ.
ಫೆಸಿಫಿಕ್ ಸಾಗರ ವ್ಯಾಪ್ತಿಯಲ್ಲಿ ಬುಧವಾರ 15.30(ಜಿಎಂಟಿ) ಗಂಟೆಯಿಂದ ವೈಮಾನಿಕ ಹಾರಾಟ ಮತ್ತು ಸಾಗರನಾವಿಕರು ಸಂಚರಿಸದಂತೆ ನಿಷೇಧಿಸಿ ಸರಕಾರ ನೋಟೀಸುಗಳನ್ನು ನೀಡಿದೆ. ಈ ವೇಳೆಯಲ್ಲಿ ಉಪಗ್ರಹದ ಮೇಲೆ ದಾಳಿ ಮಾಡಲು ಕ್ಷಿಪಣಿಯನ್ನು ಉಡಾಯಿಸಲು ನಿರ್ಧರಿಸಲಾಗಿದೆ.
ಈ ಉಪಗ್ರಹ 2006ರಲ್ಲಿ ಕಕ್ಷೆಗೆ ತಲುಪುತ್ತಲೇ ವಿದ್ಯುತ್ ಕಳೆದುಕೊಂಡಿದ್ದು ನಿಯಂತ್ರಣ ತಪ್ಪಿದೆ. ಅದು ಸಹಜ ಉಪಗ್ರಹಗಳ ಮೇಲ್ಮಟ್ಟಕ್ಕಿಂತ ಕಡಿಮೆ ಎತ್ತರದಲ್ಲಿದೆ. ಇದು ಭೂಮಿಯ ವಾತಾವರಣಕ್ಕೆ ಪ್ರವೇಶಿಸುವ ಮುನ್ನವೇ ಇದನ್ನು ಹೊಡೆದುರುಳಿಸಲು ಪೆಂಟಾಗಾನ್ ಇಚ್ಛಿಸಿದೆ. ಇದರಿಂದಾಗಿ ಬಾಹ್ಯಾಕಾಶದಲ್ಲಿ ಇದರ ಪಳಿಯುಳಿಕೆಯ ಪ್ರಮಾಣವನ್ನು ಕಡಿಮೆಗೊಳಿಸುವುದು ಅದರ ಗುರಿಯಾಗಿದೆ.
ಅಮೆರಿಕದ ಈ ಕ್ರಮದ ಕುರಿತು ಚೀನ ಮತ್ತು ರಷ್ಯಾಗಳು ಕಳವಳ ವ್ಯಕ್ತಪಡಿಸಿವೆ. ಈ ಕ್ರಮವು ಬಾಹ್ಯಾಕಾಶದ ಹೊರಗಿನ ಭದ್ರತೆಗೆ ಬೆದರಿಕೆಯುಂಟುಮಾಡಲಿದೆ ಎಂಬುದು ಅವುಗಳ ಆತಂಕ. ಆದರೆ ಅಪಾಯಕಾರಿ ಇಂಧನದಿಂದ ಜನತೆಯನ್ನು ರಕ್ಷಿಸುವುದು ಇದರ ಉದ್ದೇಶವೇ ಹೊರತು ಶಸ್ತ್ರಾಸ್ತ್ರ ಪರೀಕ್ಷೆಯಲ್ಲ ಎಂದು ಅಮೆರಿಕಾ ವಿದೇಶಾಂಗ ವಕ್ತಾರ ಸಿಯಾನ್ ಮೆಕ್‌ಕೋ ಮಾರ್ಕ್ ಸ್ಪಷ್ಟಪಡಿಸಿದ್ದಾರೆ.
|