ಹಾದಿ ತಪ್ಪಿದ ಅಮೆರಿಕದ ಬೇಹುಗಾರಿಕಾ ಉಪಗ್ರಹವನ್ನು ಧ್ವಂಸ ಮಾಡಲು ನೌಕಾ ಹಡಗಿನಿಂದ ಉಡಾಯಿಸಿದ ಕ್ಷಿಪಣಿಯು ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಗಂಟೆಗೆ 210 ಕಿ.ಮೀ(130 ಮೈಲು) ವೇಗದ ಕ್ಷಿಪಣಿಯು ಫೆಸಿಫಿಕ್ ಸಾಗರದ ವ್ಯಾಪ್ತಿಯಲ್ಲಿ ಈ ಆಕ್ರಮಣ ಮಾಡಿದೆ ಎಂದು ರಕ್ಷಣಾ ಅಧಿಕಾರಿ ಹೇಳಿದ್ದಾರೆ.
ಬುಧವಾರ ಅಪರಾಹ್ನ 10.30 (3.30 ಜಿಎಂಟಿ ಗುರವಾರ)ರ ವೇಳೆಗೆ ಇದು ಸಂಭವಿಸಿದೆ. ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದ್ದು ಅದು ತನ್ನ ಗುರಿಯ ಮೇಲೆ ಚೆನ್ನಾಗಿ ಆಕ್ರಮಣ ಮಾಡಿದೆ ಎಂದು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹೇಳಿದ್ದಾರೆ.
ಅಪಾಯಕಾರಿ ಟಾಕ್ಸಿಕ್ ಇಂಧನವನ್ನು ಒಳಗೊಂಡಿದ್ದ ಈ ಕ್ಷಿಪಣಿಯ ಅವಶೇಷಗಳು ವ್ಯೋಮದಲ್ಲಿ ಉಳಿಯಬಾರದು ಎಂಬ ಉದ್ದೇಶದಿಂದ ಕ್ಷಿಪಣಿಯನ್ನು ಬಳಸಿ ಹಾದಿತಪ್ಪಿದ, ನಿಯಂತ್ರಣ ತಪ್ಪಿದ ಉಪಗ್ರಹದ ಮೇಲೆ ಆಕ್ರಮಣ ಮಾಡಲಾಗಿತ್ತು.
ಈ ಉಪಗ್ರಹ ಜನಸಂಖ್ಯಾಭರಿತ ಪ್ರದೇಶಕ್ಕೇನಾದರೂ ಬಂದಿಳಿದರೆ, ಅದು ಜನತೆಯ ಆರೋಗ್ಯದ ಮೇಲೆ ಗಂಡಾಂತರಕಾರಿ ಪರಿಣಾಮ ಬೀರಲಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.
ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅವರಿಂದ ಅಂಗೀಕಾರ ಪಡೆದಿರುವ ಈ ಉಪಗ್ರಹದ ಮೇಲಿನ ದಾಳಿ ಪ್ರಯತ್ನವನ್ನು ಉಪಗ್ರಹದಲ್ಲಿರುವ ಟಾಕ್ಸಿಕ್ ಇಂಧನದ ಕಾಳಜಿಯಿಂದಾಗಿ ಮಾಡಲಾಗಿದೆ. ಮೂರು ಹಂತದ ದಾಳಿಯ ಸಾಮರ್ಥ್ಯವುಳ್ಳ ನೌಕಾ ಕ್ಷಿಪಣಿ ಎಸ್ಎಂ-3ಯನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದೆ. 2002ರಿಂದ ನಡೆದ ಪರೀಕ್ಷಾ ಸರಣಿಗಳಲ್ಲಿ ಇದು ದೊಡ್ಡಮಟ್ಟದ ಯಶಸ್ಸು ಸಾಧಿಸಿದೆ.
|