ನೇಪಾಳದಲ್ಲಿ ಧರ್ಮಶಾಲ ನಿರ್ಮಾಣಕ್ಕಾಗಿ ಭಾರತವು 150 ದಶಲಕ್ಷ ರೂಪಾಯಿಗಳ ಹಣಕಾಸು ನೆರವು ನೀಡಿದೆ ಎಂಬುದಾಗಿ ಇಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಕಾಠ್ಮಂಡುವಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿ ಶಿವಶಂಕರ್ ಮುಖರ್ಜಿ, ಭಾರತ್ ಮೈತ್ರಿ ಪಶುಪತಿ ಧರ್ಮಶಾಲ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು.
400 ಹಾಸಿಗೆಗಳ ಸಾಮರ್ಥ್ಯದ ಈ ಧರ್ಮಶಾಲೆಯಲ್ಲಿ ಕಚೇರಿ, ಸ್ವಾಗತ, ಪ್ರಾರ್ಥನಾ ಮಂದಿರ, ಅಡುಗೆ ಮನೆ, ಊಟದ ಮನೆ, ವಿದ್ಯುತ್ ಹಾಗೂ ಇತರ ವ್ಯವಸ್ಥೆಗಳನ್ನು ಯೋಜಿಸಲಾಗಿದೆ.
ಇದು ಹಿಂದೂ ಯಾತ್ರಿಗಳಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ವಿಶ್ರಾಂತಿ ತಾಣವನ್ನು ಒದಗಿಸಸಲಿದೆ ಮತ್ತು ಪಶುಪತಿ ಪ್ರದೇಶದ ಅಭಿವೃದ್ಧಿಯನ್ನು ಸಾಧಿಸಲಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
|