ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾದಲ್ಲಿ ಭೀಕರ ಕದನ; ಕನಿಷ್ಠ 95 ಸಾವು
ಉತ್ತರ ಶ್ರೀಲಂಕಾದ ಎಲ್ಟಿಟಿಇ ಉಗ್ರರ ಬಾಹುಳ್ಯವಿರುವ ಪ್ರದೇಶದಲ್ಲಿ ಸೇನೆ ನಡೆಸಿರುವ ತೀವ್ರ ಕಾಳಗದಲ್ಲಿ ಕನಿಷ್ಠ 92 ಉಗ್ರರು ಮತ್ತು ಮೂವರು ಸೈನಿಕರು ಮೃತರಾಗಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ವೇಳೆ ಮನ್ನಾರ್ ಪ್ರದೇಶದಲ್ಲಿ ಉಗ್ರರ ವಶದಲ್ಲಿದ್ದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ಹೇಳಿವೆ.

ಎಲ್ಟಿಟಿಇ ವಶದಲ್ಲಿರುವ ವನ್ನಿ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಸೇನೆಯು ನಡೆಸಿರುವ ದಾಳಿಯಲ್ಲಿ ಸೇನೆಯು ನಿರ್ಣಾಯಕ ಘಟ್ಟ ತಲುಪಿದ್ದು, ಮನ್ನಾರ್‌ನ ಹೊರವಲಯದ ಆಡಂಪಾನ್ ಪ್ರಾಂತ್ಯದ ಮೇಲೆ ನಿಯಂತ್ರಣ ಸಾಧಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

ಪ್ರತ್ಯೇಕ ದಾಳಿಯೊಂದರಲ್ಲಿಯೂ ಸಹ ಕನಿಷ್ಠ 13 ಉಗ್ರರು ಸಾವನ್ನಪ್ಪಿದ್ದಾರೆ. ಈ ವೇಳೆ ನಡೆದ ಮುಖಾಮುಖಿಯಲ್ಲಿ ಸೈನಿಕರೂ ಪ್ರಾಣ ಕಳೆದುಕೊಂಡಿದ್ದಾರೆ.
ಮತ್ತಷ್ಟು
ಪಾಕಿಸ್ತಾನ: ಕೈಜೋಡಿಸಿದ ಪಿಪಿಪಿ, ಪಿಎಂಎಲ್-ಎನ್
ನೇಪಾಳ: ಧರ್ಮಶಾಲೆಗೆ ಭಾರತದಿಂದ 150 ಮಿಲಿಯ
ಯುಎಇ: ಮನೆಗೆಲಸದಾಳುಗಳಿಗೆ ಕನಿಷ್ಠ ವೇತನ
ಹಾದಿತಪ್ಪಿದ ಉಪಗ್ರಹದ ಧ್ವಂಸ
ಹಾದಿ ತಪ್ಪಿದ ಉಪಗ್ರಹ ಹತ್ತಿಕ್ಕಲು ಅಮೆರಿಕ ಯತ್ನ
ಇಂಡೋನೇಶ್ಯಾ ಪ್ರಬಲ ಕಂಪನ; ಸುನಾಮಿ ಭೀತಿ