ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಪ್ರಧಾನಿ ಹುದ್ದೆಗೆ ಅಮೀನ್ ಫಾಹಿಮ್ !
ಪಾಕಿಸ್ತಾನ ಪೀಪಲ್ಸ್ ಲೀಗ್ ಮತ್ತು ಪಾಕಿಸ್ತಾನ ಮುಸ್ಲೀಮ್ ಲೀಗ್ (ನವಾಜ್ ಬಣ) ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳಲ್ಲಿ ಸಹಮತಕ್ಕೆ ಬರಲಾಗಿದ್ದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಹಿರಿಯ ನಾಯಕ ಮಕ್ದೂಮ್ ಅಮೀನ್ ಫಾಹಿಮ್ ಅವರು ಪಾಕ್ ಪ್ರಧಾನಿ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆಗಳು ಇವೆ.

ಫೆಬ್ರವರಿ 18ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರು ಮೊದಲ ಬಾರಿಗೆ ಸಭೆ ಸೇರಿ ಪ್ರಧಾನಿ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳ ಕುರಿತು ಚರ್ಚಿಸಿತು. ಸಭೆಯಲ್ಲಿ ಪಕ್ಷದ ಉಪಾಧ್ಯಕ್ಷ 68 ವರ್ಷದ ಫಾಹಿಮ್ ಅವರ ಹೆಸರು ದಟ್ಟವಾಗಿ ಕೇಳಿಬಂದಿದೆ ಎಂದು ವರದಿಯಾಗಿದೆ.

ಸುಮಾರು ಎರಡು ಗಂಟೆಗಳ ಕಾಲ ಕಳೆದ ರಾತ್ರಿ ನಡೆದ ಚರ್ಚೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲೀಂ ಲೀಗ್ ಪಕ್ಷಗಳು ಸೇರಿಕೊಂಡುಸ ರಾಷ್ಟ್ರೀಯ ಬಹುಮತ ಸರಕಾರ ರಚಿಸುವುದಕ್ಕೆ ಒಪ್ಪಿಗೆ ಸೂಚಿಸಲಾಯಿತು. ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಿಪಿಪಿ ತನ್ನದಾಗಿಸಿಕೊಂಡಿರುವುದರಿಂದ ಸಹಜವಾಗಿ ಪ್ರಧಾನಿ ಹುದ್ದೆಯು ಆ ಪಕ್ಷಕ್ಕೆ ದೊರೆಯಲಿದ್ದು, ಪಂಜಾಬ್ ಪ್ರಾಂತ್ಯದ ಅಧ್ಯಕ್ಷ ಶಾ ಮಹ್ಮೂದ್ ಖುರೇಷಿ, ಯುಸುಫ್ ರೇಜಾ ಗಿಲಾನಿ, ಮತ್ತು ಖ್ಯಾತ ನ್ಯಾಯವಾದಿ ಐತಾಜ್ ಅಹಸಾನ್ ಅವರು ಕೂಡ ಪ್ರಧಾನಿ ಹುದ್ದೆಗೆ ನಡೆದಿರುವ ಪೈಪೋಟಿಯಲ್ಲಿದ್ದಾರೆ.

ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲೀಂ ಲೀಗ್ ಈಗಾಗಲೇ ಪಿಪಿಪಿಯ ಸಂಸತ ಸದಸ್ಯ ಪ್ರಧಾನಿ ಹುದ್ದೆಗೆ ಆಯ್ಕೆಯಾಗಲಿದ್ದಾರೆ. ನ್ಯಾಷನಲ್ ಅಸೆಂಬ್ಲಿಯ ಸದಸ್ಯರ ಸೂಕ್ತ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಬೇಕು ಎಂದು ಪಿಎಂಎಲ್ (ಎನ್) ಜಂಟಿ ಕಾರ್ಯದರ್ಶಿ ಸಿದ್ಧಿಕಿ ಉಲ್ ಫಾರೂಕ್ ಸುದ್ದಿಗಾರರಿಗೆ ಹೇಳಿದ್ದಾರೆ.
ಮತ್ತಷ್ಟು
10ರ ಬಾಲಕನಿಗೆ ಐದು ಕೋಟಿ ಲಾಟರಿ!
ಶ್ರೀಲಂಕಾದಲ್ಲಿ ಭೀಕರ ಕದನ; ಕನಿಷ್ಠ 95 ಸಾವು
ಪಾಕಿಸ್ತಾನ: ಕೈಜೋಡಿಸಿದ ಪಿಪಿಪಿ, ಪಿಎಂಎಲ್-ಎನ್
ನೇಪಾಳ: ಧರ್ಮಶಾಲೆಗೆ ಭಾರತದಿಂದ 150 ಮಿಲಿಯ
ಯುಎಇ: ಮನೆಗೆಲಸದಾಳುಗಳಿಗೆ ಕನಿಷ್ಠ ವೇತನ
ಹಾದಿತಪ್ಪಿದ ಉಪಗ್ರಹದ ಧ್ವಂಸ