ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೌಹಾರ್ಧಯುತ ಸಂಬಂಧದತ್ತ ಮುಷರಫ್ ಒಲವು
ಪಾಕಿಸ್ತಾನ ಮುಸ್ಲೀಂ ಲೀಗ್ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸಂಯುಕ್ತ ಸರಕಾರ ರಚನೆಗೆ ಸಿದ್ದವಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಸರಕಾರದೊಂದಿಗೆ ಕೈಜೊಡಿಸಲು ಸಿದ್ದ ಎಂದು ಘೋಷಿಸಿದ್ದಾರೆ.

ಇತ್ತೀಚೆಗಷ್ಟೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷ ಪೂರ್ಣ ಬಹುಮತ ಪಡೆಯದೇ ಇದ್ದರೂ ವಿರೋಧ ಪಕ್ಷಗಳಾದ ಪಿಎಂಎಲ್ (ಎನ್) ಮತ್ತು ಪಿಪಿಪಿ ಅತಿ ಹೆಚ್ಚು ಸ್ಥಾನ ಗಳಿಸಿ ಸಂಯುಕ್ತ ಸರಕಾರ ರಚನೆಗೆ ಮುಂದಾಗಿವೆ. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಷರಫ್ ಅವರ ಲೇಖನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಸರಕಾರಕ್ಕೆ ಸಂವಿಧಾನ ಬದ್ಧವಾಗಿ ದೊರೆಯುವ ಎಲ್ಲ ಅಧಿಕಾರಗಳನ್ನು ನೀಡಲಾಗುವುದು. ದೇಶದ ಎಲ್ಲ ರಾಜಕೀಯ ನಾಯಕರುಗಳು ಒಟ್ಟಿಗೆ ಕೆಲಸ ಮಾಡಬೇಕಾದ ಸಂದರ್ಭವಿದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರಕಾರವು ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಸುಗಮವಾಗಿ ಆಡಳಿತ ನಡೆಸಲಿದೆ ಎಂದು ಅಮೆರಿಕ ಆಶಾಭಾವನೆ ವ್ಯಕ್ತಪಡಿಸಿದ ನಂತರ ಮುಷರಫ್ ತಮ್ಮ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ಪ್ರಜಾಪ್ರಭುತ್ವದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಯಕರುಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದೇಶದ ಅಭಿವೃದ್ದಿಯತ್ತ ಗಮನ ನೀಡಬೇಕಿದೆ. ಚುನಾವಣೆಯಲ್ಲಿ ಮತದಾರರು ತಮ್ಮ ಇಚ್ಚೆ ಏನು ಎನ್ನುವುದನ್ನು ಮತದಾನದ ಮೂಲಕ ಹೇಳಿದ್ದಾರೆ. ಜನರ ವಿಶ್ವಾಸ ಪಡೆದಿರುವ ಪಕ್ಷಗಳು ತಮ್ಮ ಮೇಲಿರುವ ಭರವಸೆಯನ್ನು ಈಡೇರಿಸಬೇಕಾದ ಸಂದರ್ಭ ಬಂದಿದೆ. ಪ್ರಜಾಪ್ರಭುತ್ವದ ಬುನಾದಿಗೆ ಇಚ್ಚಾಶಕ್ತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ಮತ್ತಷ್ಟು
ಪಾಕ್ ಪ್ರಧಾನಿ ಹುದ್ದೆಗೆ ಅಮೀನ್ ಫಾಹಿಮ್ !
10ರ ಬಾಲಕನಿಗೆ ಐದು ಕೋಟಿ ಲಾಟರಿ!
ಶ್ರೀಲಂಕಾದಲ್ಲಿ ಭೀಕರ ಕದನ; ಕನಿಷ್ಠ 95 ಸಾವು
ಪಾಕಿಸ್ತಾನ: ಕೈಜೋಡಿಸಿದ ಪಿಪಿಪಿ, ಪಿಎಂಎಲ್-ಎನ್
ನೇಪಾಳ: ಧರ್ಮಶಾಲೆಗೆ ಭಾರತದಿಂದ 150 ಮಿಲಿಯ
ಯುಎಇ: ಮನೆಗೆಲಸದಾಳುಗಳಿಗೆ ಕನಿಷ್ಠ ವೇತನ