ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನ್: ಆಜ್ ಟಿವಿ ಪ್ರಸಾರ ನಿಷೇದ
ಮುಷರಫ್ ಆಡಳಿತಾವಧಿಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟಿದ್ದ ಟಿವಿ ಕಾರ್ಯಕ್ರಮ ನಿರೂಪಕನೊರ್ವನು ಪಾಕಿಸ್ತಾನ ಮೂಲದ ಆಜ್ ಟಿ ವಿ ಚಾನೆಲ್‌ನಲ್ಲಿ ಕಾರ್ಯಕ್ರಮದ ನಿರೂಪಣೆ ಮಾಡಿದ ಕಾರಣ ಟಿವಿ ಚಾನೆಲ್‌ನ ಪ್ರಸಾರದ ಮೇಲೆ ನಿಷೇದ ವಿಧಿಸಲಾಗಿದೆ.

ನಸ್ರತ್ ಜಾವೇದ್ ಎಂಬ ಟಿ ವಿ ಕಾರ್ಯಕ್ರಮ ನಿರೂಪಕ ನಡೆಸಿಕೊಟ್ಟ ಬೋಲ್ತಾ ಪಾಕಿಸ್ತಾನ ಸುದ್ದಿ ಆಧಾರಿತ ಕಾರ್ಯಕ್ರಮ ಪ್ರಸಾರಗೊಂಡ ನಂತರ ನಿಷೇದಕ್ಕೆ ಒಳಗಾಗಿದೆ. ನಸ್ರತ್ ಜಾವೇದ್ ಅವರು ಸರಕಾರದ ವಿರುದ್ಧ ಟೀಕೆ ಮಾಡಿದರು ಎಂದು ಖಾಸಗಿ ಟಿವಿ ಪ್ರಸಾರವನ್ನು ತಡೆ ಹಿಡಿಯಲಾಗಿತ್ತು.

ಫೆಬ್ರವರಿ ಆರರಂದು ನಸ್ರತ್ ಜಾವೇದ್ ನಡೆಸಿಕೊಟ್ಟ ಸುದ್ದಿಯಾಧಾರಿತ ಕಾರ್ಯಕ್ರಮದ ನಂತರ ಪಾಕಿಸ್ತಾನದ ಅಧಿಕಾರಿಗಳು ವಿವಾದಿತ ನಿರೂಪಕ ಟಿವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಬೇಕು ಎಂದು ಸೂಚಿಸಿದ್ದರು ಎನ್ನಲಾಗಿದೆ.

ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಕಳೆದ ವರ್ಷ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ನಂತರ ಜಾವೇದ್ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು. ತುರ್ತು ಪರಿಸ್ಥಿತಿಯ ಘೋಷಣೆಯ ನಂತರ ಪಾಕಿಸ್ತಾನದಲ್ಲಿ ವಿದೇಶಿ ಮತ್ತು ಸ್ವದೇಶಿ ಟಿವಿ ಮಾಧ್ಯಮಗಳನ್ನು ಬಹಿಷ್ಕರಿಸಲಾಗಿತ್ತು.
ಮತ್ತಷ್ಟು
ಸೌಹಾರ್ಧಯುತ ಸಂಬಂಧದತ್ತ ಮುಷರಫ್ ಒಲವು
ಪಾಕ್ ಪ್ರಧಾನಿ ಹುದ್ದೆಗೆ ಅಮೀನ್ ಫಾಹಿಮ್ !
10ರ ಬಾಲಕನಿಗೆ ಐದು ಕೋಟಿ ಲಾಟರಿ!
ಶ್ರೀಲಂಕಾದಲ್ಲಿ ಭೀಕರ ಕದನ; ಕನಿಷ್ಠ 95 ಸಾವು
ಪಾಕಿಸ್ತಾನ: ಕೈಜೋಡಿಸಿದ ಪಿಪಿಪಿ, ಪಿಎಂಎಲ್-ಎನ್
ನೇಪಾಳ: ಧರ್ಮಶಾಲೆಗೆ ಭಾರತದಿಂದ 150 ಮಿಲಿಯ