ನಾಲ್ಕು ದಿನಗಳ ಭೇಟಿಗೆ ನೇಪಾಳಕ್ಕೆ ಆಗಮಿಸಿದ್ದ ಏಷಿಯನ್ ಡವ್ಹಲಪ್ಮೆಂಟ್ ಬ್ಯಾಂಕಿನ ಉಪಾಧ್ಯಕ್ಷ ಲಿಕಿನ್ ಜಿನ್ ಅವರು ನೇಪಾಳ ಅಭಿವೃದ್ದಿಗೆ ಅಲ್ಲಿನ ಶಾಸಕಾಂಗ ಚುನಾವಣೆ ಅವಶ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೇಪಾಳನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಎಡಿಬಿ ಬದ್ದವಾಗಿದ್ದು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿರುವ ಸರಕಾರದ ಬದ್ಧತೆಯನ್ನು ಅವರು ಶ್ಲಾಘಿಸಿದರು.
ನೇಪಾಳಗೆ ಆರ್ಥಿಕ ನೆರವು ನೀಡುತ್ತಿರುವ ಸದಸ್ಯರ ಉದ್ಘಾಟನಾ ಸಭೆಯಲ್ಲಿ ಭಾಗವಹಿಸಲು ನೇಪಾಳಕ್ಕೆ ಆಗಮಿಸಿದ್ದ ಅವರು ಈ ಸಂದರ್ಭದಲ್ಲಿ ಪ್ರಧಾನಿ ಗಿರಿಜಾ ಪ್ರಸಾದ್ ಕೋಯಿರಾಲಾ, ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
|